ಬಿಡಿಎ ನಿರ್ಮಿಸಿದ ಬಡಾವಣೆಯಲ್ಲಿ 38 ಎಕರೆ ಅನಧಿಕೃತ ಜಾಗ ಮರು ವಶ
ಬೆಂಗಳೂರು, ಫೆ.17- ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಮಿಸಿರುವ 64 ಬಡಾವಣೆಗಳ ಪೈಕಿ ನಾಡಪ್ರಭು ಕೆಂಪೇಗೌಡ ಹಾಗೂ ಎಚ್ ಎಸ್ ಆರ್ ಲೇಔಟ್ ನ ಎರಡನೇ ಹಂತ ಹೊರತು ಪಡಿಸಿ ಉಳಿದ 62 ಬಡಾವಣೆಗಳಲ್ಲಿ ಭೂ ಲೆಕ್ಕ ಪರಿಶೋಧನೆ ನಡೆಸಲಾಗಿದ್ದು, 38 ಎಕರೆ ಜಾಗ ಮತ್ತು ವಿವಿಧ ಅಳತೆಯ ಒಂಬತ್ತು ನಿವೇಶನಗಳನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ವಿಧಾನ ಪರಿಷತ್ ನಲ್ಲಿ ಜೆಡಿಎಸ್ ನ ಸದಸ್ಯ ಕೆ.ಎ.ತಿಪ್ಪೆಸ್ವಾಮಿ ಅವರ ಪ್ರಶ್ನೆಗೆ ಉತ್ತರ ನೀಡಿದ ಅವರು, […]