ಹೆಂಡತಿ ಮೇಲಿನ ಕೋಪಕ್ಕೆ ಮಗನನ್ನು ಕೊಚ್ಚಿ ಕೊಂದ ಪಾಪಿ ಅಪ್ಪ

ಲಕ್ನೋ,ಜ.27- ಕುಡುಕನೊಬ್ಬ ತನ್ನ ಪತ್ನಿ ಮೇಲಿನ ಕೋಪಕ್ಕೆ ಕರುಳ ಕುಡಿಯನ್ನು ಕೊಡಲಿಯಿಂದ ಕೊಚ್ಚಿ ಕೊಂದು ಶವವನ್ನು ಹೊಲದಲ್ಲಿ ಹೂತು ಹಾಕಿರುವ ಘಟನೆ ಉತ್ತರಪ್ರದೇಶದ ಫತೇಪುರ್ನಲ್ಲಿ ನಡೆದಿದೆ. ತನ್ನ ಮಗನನ್ನು ಕೊಡಲಿಯಿಂದ ಕೊಚ್ಚಿ ಕೊಂದ ಪಾಪಿ ತಂದೆಯನ್ನು ಚಂದ್ರಕಿಶೋರ್ ಲೋಧಿ ಎಂದು ಗುರುತಿಸಲಾಗಿದೆ. ಚಿತಿಸಾಪುರ್ ಗ್ರಾಮದ ನಿವಾಸಿಯಾಗಿರುವ ಲೋಧಿ ಕುಡಿದು ಬಂದು ಪತ್ನಿಯೊಂದಿಗೆ ಜಗಳವಾಡಿದ್ದ ಅದೇ ಕೋಪದಲ್ಲಿ ತನ್ನ ಮೂರು ವರ್ಷದ ಮಗನನ್ನು ಕೊಡಲಿಯಿಂದ ಕೊಚ್ಚಿ ಕೊಂದು ಶವವನ್ನು ಹೊಲದಲ್ಲಿ ಹೂತು ಹಾಕಿದ್ದ. ಪತ್ನಿ-ಇಬ್ಬರು ಮಕ್ಕಳೊಂದಿಗೆ ಬಿಜೆಪಿ ನಾಯಕ […]