ಮಾನವ ಕಳ್ಳಸಾಗಾಣಿಕೆ ಜಾಲ ಬಯಲಿಗೆಳೆದ ರಾಂಚಿ ಪೊಲೀಸರು

ರಾಂಚಿ, ಆ.21 – ಮಾನವ ಕಳ್ಳಸಾಗಾಣಿಕೆ ಜಾಲವನ್ನು ರಾಂಚಿ ಪೊಲೀಸರು ಮತ್ತೊಮ್ಮೆ ಬಯಲಿಗೆಳೆದಿದ್ದಾರೆ. ಜಾರ್ಖಂಡ್‍ನಿಂದ ಅಪಹರಿಸಿದ್ದ ನಾಲ್ವರು ಮಕ್ಕಳು ಮತ್ತು ಮಹಿಳೆಯೊಬ್ಬರನ್ನು ದೆಹಲಿಯಿಂದ ರಕ್ಷಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯೂ ಸೇರಿದಂತೆ ಕಳೆದ ಫೆಬ್ರವರಿಯಿಂದ ಇಲ್ಲಿಯವರೆಗೆ ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ ರಾಜ್ಯದ ಒಟ್ಟು 49 ಜನರನ್ನು ಕಳ್ಳಸಾಗಣೆದಾರರ ಕಪಿಮುಷ್ಠಿಯಿಂದ ರಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ. ಅಂತಹ ಕಳ್ಳಸಾಗಣೆದಾರರು ಜಾರ್ಖಂಡ್‍ನಲ್ಲಿ ಸಕ್ರಿಯರಾಗಿದ್ದಾರೆ, ಯುವತಿಯರಿಗೆ ಉದ್ಯೋಗ, ಉತ್ತಮ ಜೀವನವನ್ನು ಭರವಸೆ ನೀಡಿ ದೆಹಲಿಗೆ ಕರೆತಂದು ಮಾರಾಟ ಮಾಡುತ್ತಾರೆ. […]