4 ಲಕ್ಷ ಮೌಲ್ಯದ ಆಭರಣ ವಶ

ಬೆಂಗಳೂರು, ಆ.4- ರಾತ್ರಿ ವೇಳೆಯಲ್ಲಿ ಮನೆಗೆ ಹಾಕಿದ್ದ ಲಾಕ್ ಮುರಿದು ಕನ್ನಗಳವು ಮಾಡುತ್ತಿದ್ದ ಇಬ್ಬರು ಹಳೆ ಆರೋಪಿಗಳನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿ 4 ಲಕ್ಷ ಮೌಲ್ಯದ 92 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.ಕೆಜಿ ಹಳ್ಳಿಯ ಸಯ್ಯದ್ ನದೀಂ (37) ಮತ್ತು ಸಾರಾಯಿ ಪಾಳ್ಯದ ಅಜಂ ಖಾನ್ (42) ಬಂಧಿತ ಆರೋಪಿಗಳು. ಇವರಿಬ್ಬರು ಈ ಹಿಂದೆ ಕೆಜಿ ಹಳ್ಳಿ, ಆರ್ಟಿ ನಗರ, ಗೋವಿಂದಪುರ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಹಲವಾರು ಬಾರಿ ಮನೆಕಳವು ಮಾಡಿ ಸಿಕ್ಕಿಬಿದ್ದು ಜೈಲಿಗೆ ಹೋಗಿ ಜಾಮೀನಿನ […]