ಪೌಲ್ಟ್ರಿ ಫಾರಂಗೆ ನುಗ್ಗಿದ ನೀರು, 42 ಸಾವಿರ ಕೋಳಿಗಳ ಸಾವು

ಹೆಬ್ಬೂರು, ಆ.9- ತುಮಕೂರು ಜಿಲ್ಲೆಯಾದ್ಯಂತ ವರುಣ ಅಬ್ಬರಿಸಿದ್ದು, ಕಳೆದ ಎರಡು ದಿನಗಳಿಂದ ಮಳೆಯ ಪ್ರಮಾಣ ಕಡಿಮೆಯಾದರೂ ಪರಿಣಾಮ ಮಾತ್ರ ಹೆಚ್ಚಾಗಿದೆ. ಹೆಬ್ಬೂರು ಹೋಬಳಿಯ ಯಾಲದಹಳ್ಳಿಯ ಪೌಲ್ಟ್ರಿ ಫಾರಂಗೆ ನುಗ್ಗಿದ ನೀರು ನುಗ್ಗಿದ ಪರಿಣಾಮ ಬರೋಬ್ಬರಿ 42 ಸಾವಿರ ಕೋಳಿಗಳು ದಾರುಣವಾಗಿ ಸಾವನ್ನಪ್ಪಿವೆ. ಭಾರೀ ಮಳೆಯಿಂದಾಗಿ ಪೌಲ್ಟ್ರಿ ಫಾರಂಗೆ ನೀರು ನುಗ್ಗಿ 8 ಶೆಡ್‍ಗಳಲ್ಲಿ ಸಾಕಲಾಗಿದ್ದ ಕೋಳಿಗಳು ಸಾವನ್ನಪ್ಪಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ ಎಂದು ಮಾಲೀಕ ನಾರಾಯಣಪ್ಪ ತಮ್ಮ ಅಳಲು ತೋಡಿಕೊಂಡಿದ್ದಾರೆ. ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿದ್ದು, ಕೆರೆಕಟ್ಟೆಗಳು […]