ಕೋವಿಡ್‍ನಿಂದ ಮೃತಪಟ್ಟ ಕುಟುಂಬದವರಿಗೆ ಒಟ್ಟು 466 ಕೋಟಿ ಪರಿಹಾರ

ಬೆಂಗಳೂರು,ಫೆ.22-ಕೋವಿಡ್‍ನಿಂದ ಬೆಂಗಳೂರು ನಗರ ಜಿಲ್ಲೆಯಲ್ಲಿ ಮೃತಪಟ್ಟ ಕುಟುಂಬದವರಿಗೆ ಒಟ್ಟು 466 ಕೋಟಿ ರೂ.ಗಳ ಪರಿಹಾರ ಪಾವತಿಸಲಾಗಿದೆ ಎಂದು ಕಂದಾಯ ಸಚಿವ ಅಶೋಕ್ ತಿಳಿಸಿದರು. ವಿಧಾನಪರಿಷತ್‍ನಲ್ಲಿ ಸದಸ್ಯ ಯು.ಬಿ.ವೆಂಕಟೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕೋವಿಡ್-19 ಮೀಡಿಯಾ ಬುಲೆಟಿನ್‍ನಲ್ಲಿ 16,999 ಮಂದಿ ಮೃತಪಟ್ಟಿರುವುದಾಗಿ ದಾಖಲಾಗಿದೆ. ಈ ಪೈಕಿ 10,137 ಅರ್ಜಿಗಳು ಪರಿಹಾರಕ್ಕಾಗಿ ಸಲ್ಲಿಕೆಯಾಗಿವೆ. ಅವುಗಳಲ್ಲಿ 3450 ಬಿಪಿಎಲ್ ಪ್ರಕರಣಗಳಿವೆ. ಕೇಂದ್ರ ಸರ್ಕಾರ 50 ಸಾವಿರ ರೂ.ಗಳನ್ನು, ರಾಜ್ಯ ಸರ್ಕಾರ 1 ಲಕ್ಷ ರೂ.ಗಳನ್ನು ಘೋಷಣೆ ಮಾಡಿದೆ. IAS- IPS […]