ಜೊಂಬಿ ವೈರಾಣು: ವಿಶ್ವಕ್ಕೆ ಗಂಡಾಂತರದ ಸೂಚನೆ

ಮಾಸ್ಕೌ,ನ.30- ಹೆಪ್ಪುಗಟ್ಟಿದ ಕೆರೆಯ ತಳಭಾಗದಲ್ಲಿ ಸುಮಾರು 48,500 ವರ್ಷಗಳಿಂದ ಬದುಕುಳಿದಿರುವ ಜೊಂಬಿ ವೈರಾಣುವನ್ನು ವಿಜ್ಞಾನಿಗಳು ಪುನರುಜ್ಜೀವನಗೊಳಿಸುವ ಮೂಲಕ ವಿಶ್ವಕ್ಕೆ ಎದುರಾಗಬಹುದಾದ ಗಂಡಾಂತರದ ಮುನ್ಸೂಚನೆ ನೀಡಿದ್ದಾರೆ. ಜಾಗತಿಕ ಹವಾಮಾನ ಬದಲಾವಣೆಯಿಂದ ಪುರಾತನ ಭೂಮಿಯ ಮೇಲ್ಮೈ ಪದರ ಕರಗುತ್ತಿದ್ದು, ಗರ್ಭದಲ್ಲಿರುವ ಹೊಸ ಸಾಂಕ್ರಾಮಿಕ ಸೋಂಕುಗಳು ಅಪಾಯ ಉಂಟು ಮಾಡುವ ಆತಂಕ ಸೃಷ್ಟಿಯಾಗಿದೆ. ಯೂರೋಪಿಯನ್ ಸಂಶೋಧಕರು ರಷ್ಯಾದ ಸೈಬೀರಿಯಾ ವಲಯದಲ್ಲಿ ಸಂಶೋಧನೆ ನಡೆಸಿ ಹೆಪ್ಪುಗಟ್ಟಿದ ನೆಲದ ಒಳಗೆ 13ಕ್ಕೂ ಹೆಚ್ಚು ರೋಗಕಾರಕ ಸೋಂಕುಗಳನ್ನು ಪತ್ತೆಹಚ್ಚಿದ್ದಾರೆ. ಅದರಲ್ಲಿ ಅಪಾಯಕಾರಿ ಎಂದು ಭಾವಿಸಲಾದ ಜೊಂಬಿ […]