ಶಿಕ್ಷಕಿಗೆ ಕಿರುಕುಳ ನೀಡಿದ 4 ವಿದ್ಯಾರ್ಥಿಗಳ ಬಂಧನ

ಮೀರತ್ (ಯುಪಿ), ನ.28 -ಶಾಲೆಯೊಂದರಲ್ಲಿ ಮಹಿಳಾ ಶಿಕ್ಷಕರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ನಾಲ್ವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಅಶ್ಲೀಲ ಪದಗಳಿಂದ ಶಿಕ್ಷಕಿಯನ್ನು ನಿಂದಿಸಿದ ಎರಡು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‍ಆಗಿದ್ದು ತುರ್ತು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಕಿಥೌರ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಧನಾ ಇನಾಯತ್‍ಪುರ ಗ್ರಾಮದ ಶಾಲೆಯಲೀ ಘಟನೆ ನಡೆದಿದೆ. ಲಿಖಿತ ದೂರಿನಲ್ಲಿ, ಶಿಕ್ಷಕಿಯು ಶಾಲೆ 12 ನೇ ತರಗತಿಯ ಕೆಲವು ವಿದ್ಯಾರ್ಥಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಶಿಕ್ಷಕಿಯ ವಿರುದ್ಧ ವಿದ್ಯಾರ್ಥಿಗಳು […]