ನಕಲಿ ಅಂಕಪಟ್ಟಿ ಜಾಲ ಬಯಲಿಗೆ, ಐವರು ಸಿಸಿಬಿ ಬಲೆಗೆ

ಬೆಂಗಳೂರು,ಡಿ. 6- ಪರೀಕ್ಷೆ ಬರೆಯದೇ ಪ್ರತಿಷ್ಠಿತ ವಿಶ್ವವಿದ್ಯಾಲ ಯಗಳು ಹಾಗೂ ಪದವಿಪೂರ್ವ ಮಾಕ್ರ್ಸ್ಕಾರ್ಡ್ಗಳನ್ನು ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ಹಣ ಪಡೆದು ನಕಲಿ ಮಾಕ್ರ್ಸ್ಕಾರ್ಡ್ ಗಳನ್ನು ನೀಡಿ ವಂಚಿಸಿದ್ದ ಐದು ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಶ್ರೀ ವೆಂಕಟೇಶ್ವರ ಇನ್ಸ್ಟ್ಯೂಟ್ನಲ್ಲಿದ್ದ ನಕಲಿ 1097 ದಾಖಲಾತಿ, ಪಿಎಚ್ಡಿ ಪುಸ್ತಕಗಳು, ಹಾರ್ಡ್ಡಿಸ್ಕ್, ಪ್ರಿಂಟರ್, ಮೊಬೈಲ್ ಫೋನ್ಗಳು, ಸೀಲ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಶ್ರೀ ವೆಂಕಟೇಶ್ವರ ಇನ್ಸ್ಟ್ಯೂಟ್ ಸಂಸ್ಥೆಯ ವೆಬ್ಸೈಟ್ನಲ್ಲಿ ವಿವಿಧ ಪದವಿಗಳ ಕರೆನ್ಸ್ಪಾಂಡೆನ್ಸ್ ಕೋರ್ಸ್ಗಳ ಮಾಹಿತಿ ನೀಡಿದ್ದು, ಇದನ್ನು ಗಮನಿಸಿದ […]