ಕೇರಳದ ದವಳಪುರಂನಲ್ಲಿಅಗ್ನಿ ಅವಘಡ, ಐವರ ಸಜೀವ ದಹನ

ತಿರುವನಂತಪುರ,ಮಾ.8-ಮನೆಯಲ್ಲಿ ಆಕಸ್ಮಿಕವಾಗಿ ಸಂಭವಿಸಿದ ಅಗ್ನಿ ಅವಘಡಕ್ಕೆ ಮಗು ಸೇರಿದಂತೆ ಐವರು ಸಜೀವವಾಗಿ ದಹನವಾಗಿರುವ ಘಟನೆ ಕೇರಳದ ದವಳಪುರಂನಲ್ಲಿ ಇಂದು ಮುಂಜಾನೆ ಸಂಭವಿಸಿದೆ. ಮೃತರನ್ನು ಪ್ರತಾಪನ್(64) ಅವರ ಪತ್ನಿ ಶೆರ್ಲಿ(53), ಕಿರಿಯ ಮಗ ಅಖಿಲ್(25), ಹಿರಿಯ ಮಗನ ಪತ್ನಿ ಅರಾಮಿ(24) ಮತ್ತು 8 ತಿಂಗಳ ಮೊಮ್ಮಗ ರಾಯನ್ ಎಂದು ಗುರುತಿಸಲಾಗಿದೆ. ನಿಖಿಲ್ ಎಂಬುವರು ತೀವ್ರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವರ್ಕಳ ಸಮೀಪದ ಚಿರಿಯನ್ನೂರಿನ ದವಳಪುರಂನಲ್ಲಿ ಪ್ರತಾಪನ್ ಸೇರಿದ ಮನೆಯಲ್ಲಿ ರಾತ್ರಿ 1.45ರ ವೇಳೆಗೆ ಈ ಅವಘಡ ಸಂಭವಿಸಿದೆ. […]