6 ದಿನದಲ್ಲಿ 50 ಕೋಟಿ ಟ್ರಾಫಿಕ್ ದಂಡ ಸಂಗ್ರಹ

ಬೆಂಗಳೂರು,ಫೆ.8- ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳಲ್ಲಿ ದಂಡ ಪಾವತಿಸಲು ನೀಡಲಾಗಿರುವ ರಿಯಾಯಿತಿ ಸೌಲಭ್ಯಕ್ಕೆ ವಾಹನ ಚಾಲಕರು ಮತ್ತು ಮಾಲೀಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇಂದು ಸಂಜೆ ವೇಳೆಗೆ ದಂಡದ ಮೊತ್ತ 50 ಕೋಟಿ ದಾಟುವ ನಿರೀಕ್ಷೆ ಇದೆ. ನ್ಯಾಯಾಲಯದ ಲೋಕ ಅದಾಲತ್‍ನ ನಿರ್ಣಯದಂತೆ ಬೆಂಗಳೂರು ಪೊಲೀಸರು ಸಂಚಾರ ನಿಯಮಗಳ ದಂಡ ಮೊತ್ತದಲ್ಲಿ ಶೇ.50ರಷ್ಟು ರಿಯಾಯಿತಿ ಘೋಷಣೆ ಮಾಡಿ ಫೆ.3ರಿಂದ 11ರವರೆಗೆ ಪಾವತಿಗೆ ಕಾಲಾವಕಾಶ ನೀಡಿದ್ದಾರೆ. ಮೊದಲ ದಿನದಿಂದಲೂ ದಂಡ ಸಂಗ್ರಹದ ಪ್ರಮಾಣ ಏರಿಕೆಯಾಗುತ್ತಲೇ ಇದೆ. ಇಂದು ಮಧ್ಯಾಹ್ನದವರೆಗೆ […]