ರಿಯಾಯಿತಿ ಟ್ರಾಫಿಕ್ ದಂಡ ಪಾವತಿಗೆ ಕೆಲವೇ ಗಂಟೆಗಳು ಬಾಕಿ

ಬೆಂಗಳೂರು, ಮಾ.18- ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡ ಪಾವತಿಗೆ ನೀಡಿದ್ದ ಶೇ.50ರಷ್ಟು ರಿಯಾಯಿತಿ ಸೌಲಭ್ಯಕ್ಕೆ ಇಂದು ರಾತ್ರಿ ಕೊನೆಯ ದಿನವಾಗಿದ್ದು, ವಾಹನ ಸವಾರರು ಸ್ವಯಂ ಪ್ರೇರಿತರಾಗಿ ಸಂಚಾರಿ ಪೊಲೀಸ್ ಠಾಣೆ ಹಾಗೂ ಆನ್‍ಲೈನ್‍ನಲ್ಲಿ ಪಾವತಿಸಿದರು. ಕಳೆದ 14 ದಿನಗಳಿಂದ ಒಟ್ಟು 10.37 ಕೋಟಿ ದಂಡ ಸಂಗ್ರಹವಾಗಿದೆ. ಇಂದು ರಾತ್ರಿ 12 ಗಂಟೆ ವೇಳೆಗೆ ಇನ್ನೂ ಮೂರರಿಂದ ನಾಲ್ಕು ಕೋಟಿ ಸಂಗ್ರಹವಾಗುವ ನಿರೀಕ್ಷೆ ಇದೆ. ಕಳೆದ ಬಾರಿ ಸವಾರರು ಉತ್ಸಾಹದಿಂದ ದಂಡ ಪಾವತಿ ಮಾಡಿದ್ದರು. ಆದರೆ […]