500 ಹೊಸ ವಿಮಾನ ಖರೀದಿಸಲು ಮುಂದಾದ ಏರ್ ಇಂಡಿಯಾ

ಬೆಂಗಳೂರು,ಫೆ.11- ಹೊಸ ಮಾಲಿಕತ್ವದ ಏರ್ ಇಂಡಿಯಾ ಸಂಸ್ಥೆ ಇದೇ ಮೊದಲ ಬಾರಿಗೆ 100 ಶತಕೋಟಿ ಮೌಲ್ಯದ 500 ಹೊಸ ವಿಮಾನಗಳನ್ನು ಖರೀದಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ. ಫ್ರಾನ್ಸ್‍ನ ಏರ್‍ಬಸ್ ಹಾಗೂ ಬೋಯಿಂಗ್ ಸಂಸ್ಥೆಗಳಿಂದ 500 ವಿಮಾನಗಳನ್ನು ಖರೀದಿಸುವ ಒಪ್ಪಂದಕ್ಕೆ ಏರ್ ಇಂಡಿಯಾ ಸಹಿ ಹಾಕಿದೆ ಎಂದು ವೈಮಾನಿಕ ಕ್ಷೇತ್ರದ ಮೂಲಗಳು ತಿಳಿಸಿವೆ. ಏರ್‍ಬಸ್ ಸಂಸ್ಥೆಯಿಂದ ವಿವಿಧ ನಮೂನೆಗಳ 250 ಹಾಗೂ ಬೋಯಿಂಗ್ ಸಂಸ್ಥೆಯಿಂದ 220 ವಿಮಾನಗಳನ್ನು ಖರೀದಿ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಟಾಟಾ ಸಂಸ್ಥೆ […]