ಇರಾನ್‍ನಲ್ಲಿ ಮುಂದುವರೆದ ಹಿಜಾಬ್ ಪ್ರತಿಭಟನೆ, 50 ದಾಟಿದ ಸಾವಿನ ಸಂಖ್ಯೆ

ನವದೆಹಲಿ, ಸೆ.24- ಇರಾನ್ ನಲ್ಲಿ ಭುಗಿಲೆದ್ದಿರುವ ಹಿಜಾಬ್ ಗಲಭೆಯಲ್ಲಿ ಮೃತಪಟ್ಟವರ ಸಂಖ್ಯೆ 50ನ್ನು ದಾಟಿದ್ದು, ಪ್ರತಿಭಟನಾಕಾರರ ವಿರುದ್ಧ ಅನಗತ್ಯವಾದ ಬಲ ಪ್ರಯೋಗ ಮಾಡದಂತೆ ವಿಶ್ವಸಂಸ್ಥೆ ಎಚ್ಚರಿಕೆ ನೀಡಿದೆ. 22 ವರ್ಷದ ಮಹ್ಸಾ ಅಮಿನಿ ಸರಿಯಾಗಿ ಹಿಜಾಬ್ ಧರಿಸಿಲ್ಲ ಎಂದು ಇರಾನ್‍ನ ನೈತಿಕ ಪೊಲೀಸರು ಆಕೆಯನ್ನು ಥಳಿಸಿ ಬಂಧಿಸಿದ್ದರು. ವಿಚಾರಣೆ ವೇಳೆ ಕುಸಿದು ಬಿದ್ದ ಆಕೆ ಚಿಕಿತ್ಸೆ ಪಡೆಯುವ ಹಂತದಲ್ಲಿ ಮೃತಪಟ್ಟಿದ್ದಳು. ಇದು ಇರಾನ್ ನಲ್ಲಿ ಪ್ರತಿಭಟನೆ ಭುಗಿಲೇಳಲು ಕಾರಣವಾಗಿದೆ. ಇರಾನ್ ಮಹಿಳೆಯರು ಬುರ್ಕಾ, ಹಿಜಾಬ್ ಕಿತ್ತೆಸೆದು ಬೀದಿಗಿಳಿದಿದ್ದಾರೆ. […]