ಪ್ರವಾಹ ಅವಘಡಗಳ ತಡೆಗೆ ಬಿಬಿಎಂಪಿ ಬಜೆಟ್​​​ನಲ್ಲಿ 55ಕೋಟಿ ರೂ. ಅನುದಾನ

ಬೆಂಗಳೂರು,ಮಾ.2- ಪಾಲಿಕೆ ವ್ಯಾಪ್ತಿಯ ರಾಜಕಾಲುವೆಗಳಲ್ಲಿ ಇನ್ನು ಮುಂದೆ ಯಾವುದೇ ಪ್ರವಾಹ ಅಥವಾ ಅವಘಡ ಸಂಭವಿಸದಂತೆ 55 ಕೋಟಿ ರೂ. ವೆಚ್ಚದಲ್ಲಿ ಅಗತ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಜಯರಾಮ್ ರಾಯ್‍ಪುರ್ ತಿಳಿಸಿದ್ದಾರೆ. 2022-23ನೆ ಸಾಲಿನಲ್ಲಿ ಅಮೃತ ನಗರೋತ್ಥಾನ ಯೋಜನೆಯಡಿ 6 ಸಾವಿರ ಕೋಟಿ ರೂ. ವೆಚ್ಚದಲ್ಲಿ 2146 ಕಿಮೀ ಉದ್ದದ ರಸ್ತೆ, 67 ಕೆರೆಗಳನ್ನು ಅಭಿವೃದ್ಧಪಡಿಸಲಾಗಿದೆ. 11 ಹೊಸ ಪಾರ್ಕ್, 42 ಹೊಸ ಶಾಲಾ ಕಟ್ಟಡ, 40 ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣ ಮಾಡಲಾಗಿದ್ದು, ಈ ಎಲ್ಲ ಯೋಜನೆಗಳನ್ನು […]