BIG NEWS : 5G ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

ನವದೆಹಲಿ,ಅ.1-ದೇಶದ ಹದಿಮೂರು ನಗರಗಳಲ್ಲಿ ಇಂದಿನಿಂದ ಲಭ್ಯವಾಗುವ 5ಜಿ ಸೇವೆಗೆ ಪ್ರಧಾನಿ ನರೇಂದ್ರಮೋದಿ ಚಾಲನೆ ನೀಡಿದರು. ದೆಹಲಿಯ ಪ್ರಗತಿ ಮೈದಾನದಲ್ಲಿ ನಡೆದ 6ನೇ ಭಾರತೀಯ ಮೊಬೈಲ್ ಕಾಂಗ್ರೆಸ್ ಸಮಾವೇಶದಲ್ಲಿ 5ಜಿಗೆ ಚಾಲನೆ ನೀಡಲಾಗಿದೆ.ಈ ಸೇವೆ ಬೆಂಗಳೂರು, ಮುಂಬೈ, ದೆಹಲಿ ಸೇರಿದಂತೆ 13 ನಗರಗಳಲ್ಲಿ ಇಂದಿನಿಂದ ಲಭ್ಯವಾಗಲಿದೆ. 4ಜಿಗಿಂತಲೂ 10 ಪಟ್ಟು ವೇಗ ಹೊಂದಿರುವ 5ಜಿ ಸೇವೆ ಹೊಸ ತಂತ್ರಜ್ಞಾನ ಉದಯಕ್ಕೆ ಕಾರಣವಾಗಿದೆ. ತಡೆರಹಿತ ನೆಟ್‍ವರ್ಕ್, ವೇಗವಾದ ದತ್ತಾಂಶ ವರ್ಗಾವಣೆ, ಕಡಿಮೆ ವಲಯದಲ್ಲಿ ಹೆಚ್ಚು ವಿಶ್ವಾಸಾರ್ಹ ಸಂವಹನಗಳು,ಇಂಧನ ದಕ್ಷತೆ, ಸ್ಪೆಕ್ಟ್ರಂ […]