ಅಕ್ರಮವಾಗಿ ಅಮೇರಿಕಾಗೆ ತೆರಳುತ್ತಿದ್ದ ವಲಸಿಗರ ದೋಣಿ ಮುಳುಗಿ ಇಬ್ಬರ ಸಾವು
ಫ್ಲೋರಿಡಾ (ಅಮೇರಿಕ),ಆ.7- ಫ್ಲೋರಿಡಾ ಕೀಸ್ ಕರಾವಳಿ ಮೂಲಕ ಅಕ್ರಮವಾಗಿ ಅಮೇರಿಕಾ ಪ್ರವೇಶಿಸಲು ವಲಸಿಗರಿದ್ದ ದೋಣಿ ಸಮುದ್ರದಲ್ಲಿ ಮುಳುಗಿದ ಪರಿಣಾಮ ಇಬ್ಬರು ಸಾವನ್ನಪ್ಪಿ 5 ಜನರು ನಾಪತ್ತೆಯಾಗಿದ್ದಾರೆ. ಕಡಲತೀರದ ಸಮೀಪವೇ ಈ ದುರಂತ ಸಂಭವಿಸಿದ್ದು, ಅಮೇರಿಕದ ಕರಾವಳಿ ಕಾವಲುಪಡೆ ತಕ್ಷಣ ಅವರನ್ನು ರಕ್ಷಿಸಲು ಮುಂದಾಗಿ ಹಲವರ ಜೀವ ಉಳಿಸಿದ್ದಾರೆ. ನಾಡದೋಣಿಯಲ್ಲಿ ಸುಮಾರು 15 ವಲಸಿಗರು ಅಕ್ರಮವಾಗಿ ಅಮೇರಿಕ ಪ್ರವೇಶಕ್ಕೆ ಬರುವಾಗ ಅಲೆಗಳ ಅಬ್ಬರಕ್ಕೆ ದೋಣಿ ಮುಗುಚಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಈ ವಲಸಿಗರು ಯಾವ […]