6.20 ಲಕ್ಷ ಮೌಲ್ಯದ ಆಭರಣ ವಶ

ಬೆಂಗಳೂರು, ನ.25- ಹಗಲು ವೇಳೆ ಬೀಗ ಹಾಕಿರುವ ಮನೆಗಳಲ್ಲಿ ಕಳವು ಮಾಡುತ್ತಿದ್ದ ಹಳೆ ಆರೋಪಿಯೊಬ್ಬನನ್ನು ಮಾಗಡಿರಸ್ತೆ ಠಾಣೆ ಪೊಲೀಸರು ಬಂಧಿಸಿ 6.20 ಲಕ್ಷ ರೂ. ಬೆಲೆಬಾಳುವ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ರಾಜಾಜೀನಗರದ ಪ್ರಕಾಶ್ ನಗರ ನಿವಾಸಿ ಮಂಜುನಾಥ ಅಲಿಯಾಸ್ ಮಂಜು(40) ಬಂಧಿತ ಆರೋಪಿ. ಈತನಿಂದ 115 ಗ್ರಾಂ ತೂಕದ ಚಿನ್ನದ ವಡವೆಗಳು, 30 ಗ್ರಾಂ ಬೆಳ್ಳಿ ಕಾಲುಚೈನು, 1 ಐಫೋನ್, 1 ಪಾಸ್ಟ್ ರ್ಯಾಕ್, 2 ಟೈಮೆಕ್ಸ್ ಕೈ ಗಡಿಯಾರಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯ ಬಂಧನದಿಂದ ನಂದಿನಿ ಲೇಔಟ್ ಠಾಣೆಯ […]