ಹಣದ ಆಸೆಗೆ 6.62 ಲಕ್ಷ ಕಳೆದುಕೊಂಡ ವಿದ್ಯಾರ್ಥಿ..!

ತುಮಕೂರು,ಜು.20- ದಿನ ಬೆಳಗಾದರೆ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದ್ದು, ಇದರ ಬಗ್ಗೆ ಪೊಲೀಸರು ಎಷ್ಟೇ ಜಾಗೃತಿ ಮೂಡಿಸುತ್ತಿದ್ದರೂ ಜನ ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಇದಕ್ಕೊಂದು ಉದಾರಣೆ ಎಂದರೆ ಹಣದ ಆಸೆಗೆ ಇಲ್ಲೊಬ್ಬ ವಿದ್ಯಾರ್ಥಿ ಸುಮಾರು 6.62 ಲಕ್ಷ ರೂ. ಕಳೆದುಕೊಂಡಿರುವ ಘಟನೆ ತಾಲ್ಲೂಕಿನಲ್ಲಿ ನಡೆದಿದೆ. ಮಧುಗಿರಿ ತಾಲ್ಲೂಕು ದೊಡ್ಡೇರಿ ಹೋಬಳಿ ಕಿಟ್ಟಗಳ್ಳಿಯ ವಿದ್ಯಾರ್ಥಿ ಭೀಮ್ ಸೇನ್ ಮೊಬೈಲ್‍ಗೆ ಪ್ರತಿದಿನ 7000 ಸಂಪಾದಿಸುವ ಕೆಲಸ ಖಾಲಿ ಇದೆ ಎಂಬ ಮೆಸೇಜ್ ಬಂದಿದೆ. ಹಣದ ಆಸೆಗೆ ವಿದ್ಯಾರ್ಥಿ ಲಿಂಕ್ ಕ್ಲಿಕ್ ಮಾಡಿದ್ದಾನೆ. […]