ದರೋಡೆಗೆ ಸಂಚು: 6 ಮಂದಿ ಬಂಧನ

ಬೆಂಗಳೂರು,ಜ.12- ಮಾರಕಾಸ್ತ್ರಗಳನ್ನಿಟ್ಟುಕೊಂಡು ವ್ಯಾಪಾರಸ್ಥರು ಹಾಗೂ ಸಾರ್ವಜನಿಕರನ್ನು ತಡೆದು ಹಲ್ಲೆ ಮಾಡಿ ಹಣ ಹಾಗೂ ಬೆಲೆಬಾಳುವ ವಸ್ತುಗಳನ್ನು ದರೋಡೆ ಮಾಡಲು ಸಂಚು ರೂಪಿಸುತ್ತಿದ್ದ ಆರು ಮಂದಿಯನ್ನು ಸಿಟಿ ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ನಗರದ ಮೊಹಮ್ಮದ್ ಆಲೀಂ(32), ರಿಜ್ವಾನ್ ಖಾನ್(33), ವಾಸೀಮ್ ಅಹ್ಮದ್‍ಶೇಕ್(27), ಶಫೀ ಉಲ್ಲಾ(32), ಮೊಹಮ್ಮದ್ ಫರಸ್(32) ಮತ್ತು ತಬ್ರೇಜ್(22) ಬಂಧಿತ ದರೋಡೆಕೋರರು. ಆರೋಪಿಗಳಿಂದ ಎರಡು ಚಾಕು, ದೊಣ್ಣೆ, ಕಬ್ಬಿಣದ ರಾಡು, ನೈಲಾನ್ ಹಗ್ಗ, 50 ಗ್ರಾಂ ಖಾರದ ಪುಡಿ, ಸ್ಯಾಮ್‍ಸಂಗ್ ಕಂಪೆನಿ 4 ಮೊಬೈಲ್‍ಗಳು, […]

ಸ್ವಾತಂತ್ರ್ಯೋತ್ಸವ ಬೆನ್ನಲ್ಲೇ ಮದ್ದುಗುಂಡು ಕಳ್ಳಸಾಗಣೆ ಮಾಡುತ್ತಿದ್ದ 6 ಮಂದಿ ಅರೆಸ್ಟ್

ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ ಮದ್ದುಗುಂಡುಗಳ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ದೆಹಲಿ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.ಅವರ ವಶದಿಂದ ಒಟ್ಟು 2,251 ಜೀವಂತ ಕಾಟ್ರಿಡ್ಜ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಇಂದು ತಿಳಿಸಿದ್ದಾರೆ. ಆರೋಪಿಗಳನ್ನು ರಾಷ್ಟ್ರ ರಾಜಧಾನಿಯ ಆನಂದ್ ವಿಹಾರ್ ಪ್ರದೇಶದಲ್ಲಿ ಎರಡು ಚೀಲಗಳ ಕಾಟ್ರಿಡ್ಜ್ಗಳೊಂದಿಗೆ ಬಂಧಿಸಲಾಗಿದೆ.ಉತ್ತರ ಪ್ರದೇಶದ ಲಕ್ನೋಗೆ ಸರಬರಾಜು ಮಾಡಲು ಉದ್ದೇಶಿಸಲಾಗಿತ್ತು ಎಂದು ಪೂರ್ವ ವಲಯದ ಸಹಾಯಕ ಪೊಲೀಸ್ ಆಯುಕ್ತ ವಿಕ್ರಮಜಿತ್ ಸಿಂಗ್ ಹೇಳಿದ್ದಾರೆ. ಪ್ರಕರಣದಲ್ಲಿ ಭಯೋತ್ಪಾದನೆಯ ಕೋನವನ್ನು ಪೊಲೀಸರು ಇನ್ನೂ ತಳ್ಳಿಹಾಕಿಲ್ಲ ಎಂದು […]