ಮಹಾರಾಷ್ಟ್ರದ ಆರು ಕೆಮ್ಮು ಸಿರಪ್ ತಯಾರಕ ಕಂಪನಿಗಳ ಪರವಾನಗಿ ಅಮಾನತು

ಮುಂಬೈ,ಮಾ.4-ಮಹಾರಾಷ್ಟ್ರದ ಆರು ಕೆಮ್ಮು ಸಿರಪ್ ತಯಾರಕರ ಪರವಾನಗಿಯನ್ನು ಅಮಾನತುಗೊಳಿಸಲಾಗಿದೆ. ಬಿಜೆಪಿ ಶಾಸಕ ಆಶಿಶ್ ಶೇಲಾರ್ ಅವರ ಗಮನ ಸೆಳೆಯುವ ನೋಟೀಸ್ಗೆ ಉತ್ತರಿಸಿರುವ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ ಸಚಿವ ಸಂಜಯ್ ರಾಥೋಡ್ ಅವರು ವಿಧಾನಸಭೆಗೆ ಮಾಹಿತಿ ನೀಡಿದ್ದಾರೆ. ಉತ್ತರ ಪ್ರದೇಶದ ನೋಯ್ಡಾ ಮೂಲದ ಸಂಸ್ಥೆಯೊಂದು ತಯಾರಿಸಿದ ಕೆಮ್ಮಿನ ಸಿರಪ್ ಕಳೆದ ವರ್ಷ ಉಜ್ಬೇಕಿಸ್ತಾನದಲ್ಲಿ 18 ಮಕ್ಕಳ ಸಾವಿಗೆ ಕಾರಣವಾಗಿತ್ತು ಎಂದು ಆರೋಪಿಸಲಾಗಿದೆ. ಸಂಸ್ಥೆಯ ಮೂವರು ಉದ್ಯೋಗಿಗಳನ್ನು ಬಂಧಿಸಿರುವುದಾಗಿ ನೋಯ್ಡಾ ಪೊಲೀಸರು ತಿಳಿಸಿದ್ದಾರೆ. ಪಾಕ್ನಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಿಗೆ […]