ಟರ್ಕಿ ರಾಜಧಾನಿ ಇಸ್ತಾನ್‍ಬುಲ್‍ನಲ್ಲಿ ಬಾಂಬ್ ಸ್ಪೋಟ, 6 ಮಂದಿ ಸಾವು

ಇಸ್ತಾನ್‍ಬುಲï, ನ.14- ಟರ್ಕಿ ರಾಜಧಾನಿ ಇಸ್ತಾನ್‍ಬುಲ್‍ನ ಹೃದಯಭಾಗದ ಪಾದಚಾರಿ ಮಾರ್ಗವೊಂದರಲ್ಲಿ ಬಾಂಬ್ ಸ್ಪೋಟಗೊಂಡು ಆರು ಜನರು ಸಾವನ್ನಪ್ಪಿದ್ದಾರೆ,ಹಲವಾರು ಜನರು ಗಾಯಗೊಂಡಿದ್ದಾರೆ. ಪ್ರಸಿದ್ಧವಾದ ತಕ್ಸಿಮ್ ಸ್ಕ್ವಯರ್ ಬಳಿ ಈ ಘಟನೆ ನಡೆದಿದ್ದು ರೆಸ್ಟೋರೆಂಟ್‍ಗಳಿಂದ ಕೂಡಿದ ಜನಪ್ರಿಯ ಮಾರ್ಗದಲ್ಲಿ ಬಾಂಬ್ ಸ್ಪೋಟಿಸಿದ್ದು ,ಭಯಭೀತರಾದ ಜನರು ದಿಕ್ಕಾಪಾಲಾಗಿ ಓಡಿ ಹತಿರದದ ಮಳಿಗೆಗಳ ಒಳಗೆ ಜೀವ ಉಳಿಸಿಕೊಳ್ಳಲು ಅವಿತುಕೊಂಡರು ಎಂದು ಸ್ಥಳೀಯರು ಮಾಧ್ಯಮಗಳಿಗೆ ತಿಳಿಸಿದರು. ತುರ್ತು ವಾಹನಗಳುಘಟನಾ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ ಆದರೆ 6 ಮಂದಿ ಸ್ಥಳದಲ್ಲೇ ಜೀವ ಬಿಟ್ಟಿದ್ದಾರೆ. […]

ಎಲೆಕ್ಟ್ರಿಕ್ ಬಸ್ ಹರಿದು 6 ಮಂದಿ ಸಾವು

ಕಾನ್ಪುರ, ಜ.31- ಎಲೆಕ್ಟ್ರಿಕ್ ಬಸ್ ಇಳಿಜಾರು ರಸ್ತೆಯಲ್ಲಿ ಬ್ರೇಕ್ ಫೇಲಾದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಪಾದಚಾರಿಗಳ ಮೇಲೆ ಹರಿದು 6 ಮಂದಿ ಸಾವನ್ನಪ್ಪಿ ಹಲವಾರು ಮಂದಿ ಗಾಯಗೊಂಡಿರುವ ಘಟನೆ ನಗರದಲ್ಲಿ ನಡೆದಿದೆ. ಕಾನ್ಪುರದ ಟಾಟಾ ಮಿಲ್ ಕ್ರಾಸ್ ರೋಡ್‍ನ ಬಳಿ ಎಲೆಕ್ಟ್ರಿಕಲ್ ಬಸ್ ನಿಲ್ಲಿಸಲಾಗಿತ್ತು. ಆ ಸಂದರ್ಭದಲ್ಲಿ ಈ ಬಸ್‍ನ ಬ್ರೇಕ್ ವೈಫಲ್ಯಗೊಂಡು ಏಕಾಏಕಿ ಅಡ್ಡಾದಿಡ್ಡಿ ಬಸ್ ಚಲಿಸಿ ಕಾರು ಹಾಗೂ ಬೈಕ್‍ಗಳಿಗೆ ಡಿಕ್ಕಿ ಹೊಡೆದುಕೊಂಡು ಹೋಗಿ ಪಾದಚಾರಿಗಳ ಮೇಲೆ ಹರಿದಿದೆ. ಪರಿಣಾಮ ಆರು ಮಂದಿ […]