ಆಸ್ಟ್ರೇಲಿಯಾದಲ್ಲಿ ಗುಂಡಿನ ಚಕಮಕಿ, 6 ಜನರ ಸಾವು

ಬ್ರಿಸ್ಬೇನ್, (ಆಸ್ಟ್ರೇಲಿಯಾ)ಡಿ .13- ನಾಪತ್ತೆಯಾಗಿದ್ದ ವ್ಯಕ್ತಿಯ ಬಗ್ಗೆ ತನಿಖೆ ನಡೆಸಲು ಆಗಮಿಸಿದ ಪೊಲೀಸರು ಹಾಗೂ ಅಧಿಕಾರಿಗಳ ಮೇಲೆ ಹೊಂಚು ಹಾಕಿ ಬಂದೂಕಿನಿಂದ ಗುಂಡಿನ ದಾಳಿ ನಡೆಸಲಾಗಿದ್ದು ಘಟನೆಯಲ್ಲಿ ಮೂವರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಆರು ಜನರು ಸಾವನ್ನಪ್ಪಿದ್ದಾರೆ. ಕ್ವೀನ್ಸ್‍ಲ್ಯಾಂಡ್‍ನ ಗುಡ್ಡಗಾಡು ಪ್ರದೇಶದಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದೆ. ಪೊಲೀಸರ ಮೇಲೆ ನುಗ್ಗಿ ಬಂದ ತಂಡ ಹಲ್ಲೆ ಕೂಡ ನಡೆಸಿದ್ದು ಪ್ರತಿಯಾಗಿ ನಮ್ಮವರು ಗುಂಡು ಹಾರಿಸಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ. ಮೊದಲಿಗೆ ಇಬ್ಬರು ಶೂಟರ್‍ಗಳು ಪೊಲೀಸ್ ಅಧಿಕಾರಿಗಳ […]
ನೇಪಾಳದಲ್ಲಿ 6.3 ತೀವ್ರತೆಯ ಭೂಕಂಪ, 6 ಮಂದಿ ಸಾವು

ಕಠ್ಮಂಡು/ನವದೆಹಲಿ, ನ.9-ನೇಪಾಳ ಗಡಿಯ ಉತ್ತರಾಖಂಡದ ಪಿಥೋರಗಢ ಸಮೀಪ ಹಿಮಾಲಯ ಪ್ರದೇಶದಲ್ಲಿ ಇಂದು ಮುಂಜಾನೆ 6.3 ತೀವ್ರತೆಯ ಭೂಕಂಪನ ಸಂಭವಿಸಿದ್ದು, ಕನಿಷ್ಠ ಆರು ಮಂದಿ ಸಾವನ್ನಪ್ಪಿ ಹಲವರು ಗಾಯಗೊಂಡಿದ್ದಾರೆ. ಉತ್ತರ ಭಾರತ ಮತ್ತು ನೇಪಾಳದ ಕೆಲವು ಭಾಗಗಳಲ್ಲಿ ಪ್ರಬಲ ಕಂಪನಗಳು ಸಂಭವಿಸಿದೆ, ನಸುಕಿನ 1.57ಕ್ಕೆ ಸಂಭವಿಸಿದ 6.3 ತೀವ್ರತೆಯ ಭೂಕಂಪದ ಕೇಂದ್ರಬಿಂದು ಪಿಥೋರಗಢ್‍ನಿಂದ ಪೂರ್ವ ಆಗ್ನೇಯಕ್ಕೆ 90 ಕಿಮೀ ದೂರದಲ್ಲಿರುವ ನೇಪಾಳದಲ್ಲಿದೆ ಎಂದು ಭಾರತೀಯ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‍ಸಿಎಸ್) ತಿಳಿಸಿದೆ. ನೇಪಾಳದ ರಾಷ್ಟ್ರೀಯ ಭೂಕಂಪ ನಿಗಾ ಕೇಂದ್ರದ […]