85 ಲಕ್ಷ ರೂ. ಸುಲಿಗೆ ಮಾಡಿದ್ದ ದರೋಡೆಕೋರರ ಬಂಧನ, 62 ಲಕ್ಷ ವಶ

ಬೆಂಗಳೂರು,ಜ.20- ದ್ವಿಚಕ್ರ ವಾಹನ ಸವಾರರನ್ನು ಅಡ್ಡಗಟ್ಟಿ ಚಿನ್ನದ ವ್ಯಾಪಾರಿಯ 85 ಲಕ್ಷ ರೂ. ಸುಲಿಗೆ ಮಾಡಿ ಪರಾರಿಯಾಗಿದ್ದ ಮೂವರು ದರೋಡೆಕೋರರನ್ನು ಕಲಾಸಿಪಾಳ್ಯ ಠಾಣೆ ಪೊಲೀಸರು ಬಂಧಿಸಿ 62 ಲಕ್ಷ ನಗದು ಮತ್ತು ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಕಲಾಸಿಪಾಳ್ಯದ ಬಡಾಮಕಾನ್ ಎಚ್.ಸಿದ್ದಯ್ಯರಸ್ತೆ ನಿವಾಸಿ ಮೊಹಮ್ಮದ್ ಜಿಲಾನ್(27), ಶಿವಾಜಿನಗರದ ಅಬ್ದುಲ್ ವಹಾಬ್ ಅಲಿಯಾಸ್ ಕಮರ್(35) ಮತ್ತು ಮಹಾಲಿಂಗೇಶ್ವರ ಬಡಾವಣೆಯ ಪೃಥ್ವಿಕ್(20) ಬಂಧಿತ ಆರೋಪಿಗಳು. ಆರೋಪಿ ಮೊಹಮ್ಮದ್‍ನಿಂದ 31 ಲಕ್ಷ ನಗದು, ಅಬ್ದುಲ್ ವಹಾಬ್‍ನಿಂದ 27 ಲಕ್ಷ ರೂ. ಹಾಗೂ […]