ರಾಜ್ಯದ 68 ವಸತಿ ಶಾಲೆಗಳಿಗೆ ಅಂಬೇಡ್ಕರ್ ಹೆಸರು

ಬೆಂಗಳೂರು, ಜ.2- ಸಮಾಜಕಲ್ಯಾಣ ಇಲಾಖೆಯ ಅೀಧಿನದಲ್ಲಿ ನಡೆಯುತ್ತಿರುವ 68 ವಸತಿ ಶಾಲೆಗಳಿಗೆ ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಗಳೆಂದು ನಾಮಕರಣ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸಮಾಜ ಕಲ್ಯಾಣ ಇಲಾಖೆ ಆಯುಕ್ತರು ಅ.25ರಂದು ಸರ್ಕಾರಕ್ಕೆ ಪತ್ರ ಬರೆದಿದ್ದು, ಇಲಾಖೆಯಿಂದ ರಾಜ್ಯಾದ್ಯಂತ 68 ವಸತಿ ಶಾಲೆಗಳನ್ನು ನಿರ್ವಹಿಸಲಾಗುತ್ತಿದೆ. ಪ್ರತಿ ತರಗತಿಗೆ 25ರಂತೆ 5 ತರಗತಿಗಳಿಂದ 125 ವಿದ್ಯಾರ್ಥಿಗಳು ಒಂದು ಶಾಲೆಯಲ್ಲಿದ್ದಾರೆ. ಒಟ್ಟು 68 ಶಾಲೆಗಳಿಂದ 8500 ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಅವರಿಗೆ ವಸತಿ, ಭೋಜನ, […]