UP Election: 6ನೇ ಹಂತದ ಮತದಾನ, ಸಿಎಂ ಯೋಗಿ ಸೇರಿ ಪ್ರಮುಖರ ಭವಿಷ್ಯ ನಿರ್ಧಾರ

ಲಕ್ನೋ, ಮಾ.3 -ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಆರನೇ ಹಂತದ ಮತದಾನ ಇಂದು ಬೆಳಗ್ಗೆ ಆರಂಭಗೊಂಡಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ಪ್ರಮುಕರ ಭವಿಷ್ಯಕ್ಕೆ ಮತದಾರರು ಮುದ್ರೆ ಒತ್ತಿದ್ದಾರೆ.  ರಾಜ್ಯದ 10 ಜಿಲ್ಲಾಗಳಲ್ಲಿ 57 ಸ್ಥಾನಗಳಿಗೆ 676 ಅಭ್ಯರ್ಥಿಗಳು ಸ್ರ್ಪಧಿಸಿದ್ದು ಭಾರಿ ಕುತೂಹಲ ಕೆರಳಿಸಿದೆ. ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನದಲ್ಲಿ ಜನರು ಉತ್ಸಾಹದಿಮದ ಮತಗಟ್ಟೆಗೆ ಆಗಮಿಸಿ ಮತಚಲಾಯಿಸಿದರು. ಸುಮಾರು 2.15 ಕೋಟಿ ಜನರು ಮತದಾನದ ಹಕ್ಕು ಪಡೆದಿದ್ದು ಸರಾಸರಿ ಶೆ.60ರಷ್ಟು ಮತದಾನವಾಗುವ ಸಾಧ್ಯತೆ ಇದೆ.  […]