ಟರ್ಕಿ, ಸಿರಿಯಾದಲ್ಲಿ ಭೂಕಂಪ, 2 ಸಾವಿರ ಸಮೀಪಿಸಿದ ಸಾವಿನ ಸಂಖ್ಯೆ

ಅಂಕಾರಾ (ಟರ್ಕಿ), ಫೆ.6 -ಟರ್ಕಿ, ಸಿರಿಯಾ ಎರಡು ದೇಶಗಳ ನಡುವಿನ ಗಡಿಯ ಸಮೀಪ ಆಗ್ನೇಯ ಟರ್ಕಿಯಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿದ್ದು, ಇಲ್ಲಿಯವರೆಗೂ 1500 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಆಗ್ನೇಯ ಟರ್ಕಿಯಲ್ಲಿ ಇಂದು ಮುಂಜಾನೆ 7.8 ತೀವ್ರತೆಯ ಭೂಕಂಪ ಸಂಭವಿಸಿದ್ದು, ಹಲವಾರು ಕಟ್ಟಡಗಳು ಉರುಳಿ ಬಿದ್ದಿದೆ. ಟರ್ಕಿ ರಾಜಧಾನಿ ಗಾಜಿಯಾಂಟೆಪ್‍ನಿಂದ 33 ಕಿಲೋಮೀಟರ್ ದೂರದಲ್ಲಿ ಭೂಕಂಪನ ಕೇಂದ್ರೀಕೃತವಾಗಿದೆ ಎಂದು ಅಮೆರಿಕ ಜಿಯೋಲಾಜಿಕಲ್ ಸರ್ವೆ ಹೇಳಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಟರ್ಕಿಯಲ್ಲಿ ಕನಿಷ್ಠ 1500ಕ್ಕೂ […]