ಮಾನವ ಹಕ್ಕು ಅಧಿಕಾರಿಗಳ ಹೆಸರಿನಲ್ಲಿ ವಸೂಲಿಗಿಳಿದಿದ್ದ 7 ವಂಚಕರ ಬಂಧನ

ಬೆಂಗಳೂರು, ನ.18- ಹ್ಯೂಮನ್ ರೈಟ್ಸ್ ಆಫೀಸರ್ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿದ್ದ ನಾಲ್ವರು ಮಹಿಳೆಯರು ಸೇರಿದಂತೆ ಏಳು ಮಂದಿ ಆರೋಪಿಗಳನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ರಕಾಶ್ ಮೂರ್ತಿ, ಪ್ರದೀಪ್, ದ್ರುವರಾಜ್, ರಮ್ಯ, ಸುಶ್ಮಿತಾ, ಜಯಲಕ್ಷ್ಮಿ ಮತ್ತು ಇಂದ್ರ ಬಂಧಿತ ಆರೋಪಿಗಳು. ಬಂಧಿತರಿಂದ ಹುಂಡೈ ಕಾರು ಹಾಗೂ ಎರಡು ಸಾವಿರ ಹಣ ವಶಪಡಿಸಿಕೊಂಡಿದ್ದಾರೆ. ನ.14ರಂದು ಮಧ್ಯಾಹ್ನ 2 ಗಂಟೆ ಸುಮಾರಿನಲ್ಲಿ ಭದ್ರಪ್ಪ ಲೇಔಟ್, ಮಾತಾಜಿ ಹೋಮ್ ಅಪ್ಲೈಯನ್ಸ್ ಅಂಗಡಿಗೆ ಹುಂಡೈ ಕಾರಿನಲ್ಲಿ ಬಂದ ಏಳು ಮಂದಿ ಆರೋಪಿಗಳು […]