7 ಲಕ್ಷ ಹೆಕ್ಟೇರ್ ಅರಣ್ಯ ಪ್ರದೇಶ ಕಂದಾಯ ವ್ಯಾಪ್ತಿಗೆ

ಬೆಳಗಾವಿ,ಡಿ.29-ರಾಜ್ಯದಲ್ಲಿ 3,30186.93 ಹೆಕ್ಟರ್ ಪ್ರದೇಶವನ್ನು ಮಾತ್ರ ಡಿಮ್ಡ್ ಫಾರೆಸ್ಟ್ ಎಂದು ಗುರುತಿಸಲಾಗಿದ್ದು, ಉಳಿದೆಲ್ಲಾ ಜಮೀನನ್ನು ಕಂದಾಯ ಇಲಾಖೆಗೆ ವಾಪಾಸ್ ನೀಡಲಾಗಿದೆ ಎಂದು ರಾಜ್ಯ ಸರ್ಕಾರ ಸ್ಪಷ್ಟ ಪಡಿಸಿದೆ. ವಿಧಾನಪರಿಷತ್‍ನ ಪ್ರಶ್ನೋತ್ತರ ವೇಳೆಯಲ್ಲಿಂದು ಕೇಳಲಾದ ಪ್ರಶ್ನೆಗೆ ಸರ್ಕಾರದ ಪರವಾಗಿ ಇಬ್ಬರು ಸಚಿವರು ಉತ್ತರಿಸಿದ್ದಾರೆ. ಸದಸ್ಯ ಕೆ.ಕೆ.ಹರೀಶ್‍ಕುಮಾರ್, ರಾಜ್ಯದಲ್ಲಿ 9,94,881.11 ಹೆಕ್ಟರ್ ಪ್ರದೇಶವನ್ನು ಡಿಮ್ಡ್ ಫಾರೆಸ್ಟ್ ಸ್ಥಾನದಿಂದ ಹಿಂಪಡೆಯಲಾಗಿದೆಯೇ ಎಂದು ಪ್ರಶ್ನಿಸಿದರು. ಆರಂಭದಲ್ಲಿ ಉತ್ತರ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿರುವ ಜಿಲ್ಲಾ ಮಟ್ಟದ […]