ಕಾಮಗಾರಿ ವೇಳೆ ಮಣ್ಣು ಕುಸಿತ, ಏಳು ಕಾರ್ಮಿಕರ ರಕ್ಷಣೆ
ಕಟ್ನಿ, ಫೆ 13- ಮಧ್ಯಪ್ರದೇಶದ ಕಟ್ನಿ ಜಿಲ್ಲಾಯ ಸ್ಲೀಮನಾಬಾದ್‍ನಲ್ಲಿ ಸುರಂಗ ನಿರ್ಮಾಣ ಕಾಮಗಾರಿ ಮಣ್ಣು ಕುಸಿದುಸಂಭವಿಸಿದ ಅವಗಡದಲ್ಲಿ ಒಳಗೆ ಸಿಲುಕಿಕೊಂಡಿದ್ದ ಏಳು ಮಂದಿ ಕಾರ್ಮಿಕರನ್ನು ರಕ್ಷಿಸಲಾಗಿದೆ. ಬರ್ಗಿ ಕಾಲುವೆ ಯೋಜನೆಯ ಸುರಂಗ ಕಾಮಗಾರಿ ನಡೆಸುವಾಗ ತಡರಾತ್ರಿ ಮಣ್ನು ಕುಸಿದಿದ್ದು, ಒಟ್ಟು ಒಂಬತ್ತು ಕಾರ್ಮಿಕರು ಸಿಕ್ಕಿಬಿದ್ದಿದ್ದಾರು ಅವರಲ್ಲಿ ಏಳು ಜನರನ್ನು ಅವಶೇಷಗಳಿಂದ ಹೊರತೆಗೆಯಲಾಗಿದೆ, ರಾಜ್ಯ ವಿಪತ್ತು ತುರ್ತು ನಿರ್ವಹಣಾ ಪಡೆ ಇನ್ನಿಬ್ಬರ ರಕ್ಷಣೆಗೆ ಕಾರ್ಯಾಚರಣೆ ಮುಂದುವರೆದಿದೆ ಎಂದು ಮಧ್ಯಪ್ರದೇಶದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ರಾಜೇಶ್ ರಾಜೋರಾ ತಿಳಿಸಿದ್ದಾರೆ. […]