ಕಸಗುಡಿಸಿ, ಟಾಯ್ಲೆಟ್ ಕ್ಲೀನ್ ಮಾಡಲು 70 ಲಕ್ಷ ರೂ.ಗಳ ಟೆಂಡರ್ !

ಬೆಂಗಳೂರು,ಫೆ.8- ಸಿಲಿಕಾನ್ ಸಿಟಿಯಲ್ಲಿ ಕಸಗುಡಿಸಿ, ಟಾಯ್ಲೆಟ್ ಕ್ಲೀನ್ ಮಾಡಲು ಲಕ್ಷ ಲಕ್ಷ ಹಣ ಬೇಕು. ಇದೆನಪ್ಪಾ ಕಸ ಗುಡಿಸಲು ಲಕ್ಷ ಲಕ್ಷ ಹಣ ಬೇಕು ಅಂತಿದ್ದರಲ್ಲಾ ಎಂದು ನೀವು ಹುಬ್ಬೇರಿಸಬೇಡಿ.ಇಂತಹ ಪರಮಾದ್ಭುತಗಳು ನಡೆಯುವುದು ಕೇವಲ ಬಿಬಿಎಂಪಿಯಲ್ಲಿ ಮಾತ್ರ. ಸಾರ್ವಜನಿಕರ ತೆರಿಗೆ ಹಣದಲ್ಲಿ ಹಗಲು ದರೋಡೆ ಮಾಡಲು ಮುಂದಾಗಿರುವ ಬಿಬಿಎಂಪಿ ಅಧಿಕಾರಿಗಳು ಕಸ ಗುಡಿಸುವ ಹಾಗೂ ಬಾತ್ ರೂಂ ಕ್ಲಿನಿಂಗ್ ಮಾಡುವ ಕೆಲಸಕ್ಕೆ ಬರೊಬ್ಬರಿ 70 ಲಕ್ಷ ರೂ.ಗಳ ಟೆಂಡರ್ ಕರೆದಿದ್ದಾರೆ. ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿ ಕಸಗುಡಿಸಿ. […]