ದೆಹಲಿಯ ಕರ್ತವ್ಯ ಪಥದಲ್ಲಿ ಸೇನಾಶಕ್ತಿ ಅನಾವರಣ

ನವದೆಹಲಿ,ಜ.26- ದೇಶದ 74ನೇ ಗಣರಾಜ್ಯೋತ್ಸವದಂದು ರಾಷ್ಟ್ರ ರಾಜಧಾನಿ ದೆಹಲಿಯ ಕರ್ತವ್ಯಪಥದಲ್ಲಿ ನಡೆದ ಪ್ರದರ್ಶನಗಳಲ್ಲಿ ದೇಶದ ಸೇನಾ ಶಕ್ತಿ ಮತ್ತು ನಾರಿ ಶಕ್ತಿ ಅನಾವರಣಗೊಂಡಿತ್ತು. ಮಂಜುಕವಿದ ಮಸುಕಿನ ವಾತವರಣದಲ್ಲೂ ವಿವಿಧ ಭದ್ರತಾಪಡೆಗಳ ಶಿಸ್ತುಬದ್ಧ ಪಥಸಂಚಲನ, ಕಸರತ್ತು, ಸಾಂಸ್ಕøತಿಕ ಕಾರ್ಯಕ್ರಮಗಳು ರೋಮಾಂಚನೀಯ ಅನುಭವ ನೀಡಿತ್ತು. ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ರಕ್ಷಣಾ ಸಚಿವರ ರಾಜನಾಥ್ ಸಿಂಗ್, ಈಜಿಪ್ಟ್ ಅಧ್ಯಕ್ಷಅಬೆಡೆಲ್ ಫಹಾ ಎಲ್-ಸಿಸಿ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ, ದೇಶಭಕ್ತಿ ಉಮ್ಮಳ್ಳಿಸುವ ಭಾವೋದ್ವೇಗಕ್ಕೆ ಸಾಕ್ಷಿಯಾದರು. ಇದಕ್ಕೂ […]

ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಮೇಳೈಸಿದ ಮಕ್ಕಳ ಕಲರವ

ಬೆಂಗಳೂರು,ಜ.26- ಮೈನವಿರೇಳಿಸುವಂತ ಬೈಕ್ ಮೇಲಿನ ವೈವಿಧ್ಯಮಯ ಕಸರತ್ತು, ಶ್ವಾನದಳದ ಆಕರ್ಷಕ ಪಥ ಸಂಚಲ, ಶಾಲಾ ಮಕ್ಕಳ ಚಿತ್ತಾಕರ್ಷಕ ಸಾಂಸ್ಕøತಿಕ ಕಾರ್ಯಕ್ರಮ ಗಳು ಇಂದು ನಗರದ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ನಡೆದ 74ನೇ ಗಣರಾಜ್ಯೋತ್ಸವದ ವಿಶೇಷ ಆಕರ್ಷಣೆಯಾಗಿದ್ದವು. ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಬಳಿಕ ಗೌರವ ರಕ್ಷೆ ಸ್ವೀಕರಿಸಿ, ತೆರೆದ ವಾಹನದಲ್ಲಿ ಪೆರೇಡ್ ವೀಕ್ಷಣೆ ಮಾಡಿದರು. ರಾಜ್ಯಪಾಲರ ಭಾಷಣದ ನಂತರ ಪೆರೇಡ್ ಕಮಾಂಡರ್, ಕೇರಳ ರಾಜ್ಯ ಪೆÇಲೀಸ್, ಶ್ವಾನದಳ, ಬಿಎಸ್‍ಎಫ್, ಸಿಆರ್‍ಪಿಎಫ್, ಕೆಎಸ್‍ಆರ್ […]