75ನೇ ಸೇನಾ ದಿನ : ಬೆಂಗಳೂರಲ್ಲಿ ಮೈನವಿರೇಳಿಸಿದ ಸೈನಿಕರ ಶಕ್ತಿ ಪ್ರದರ್ಶನ

ಬೆಂಗಳೂರು,ಜ.15- ಭಾರತೀಯ ಸೇನೆಯ 75ನೇ ಸೇನಾ ದಿನದ ಪ್ರಯುಕ್ತ ನಗರದಲ್ಲಿ ವೀರಯೋಧರ ದೇಶಭಕ್ತಿ ವಿಜೃಂಭಿಸಿದೆ.ರಾಷ್ಟ್ರ ರಾಜಧಾನಿಯ ಹೊರಗೆ ಇದೇ ಮೊದಲ ಭಾರಿಗೆ ಮಹತ್ವದ ಕಾರ್ಯಕ್ರಮ ನಡೆಯುತ್ತಿದ್ದು ಸಂಕ್ರಾಂತಿ ಹಬ್ಬದ ಸಡಗರದ ನಡುವೆ ಮೈನವಿರೇಳಿಸುವ ಫಥಸಂಚಲನ ನಡೆದಿದ್ದು ಬೆಂಗಳೂರಿನ ಜನರು ಪುಳಕಿತಗೊಂಡಿದ್ದಾರೆ. ಹಲಸೂರು ಬಳಿಯ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್‍ನ ಯುದ್ಧ ಸ್ಮಾರಕಕ್ಕೆ ಸೇನೆಯ ಮುಖ್ಯಸ್ಥರಾದ ಜನರಲ್ ಮನೋಜ್ ಪಾಂಡೆ ಬೆಳಿಗ್ಗೆ ಗೌರವ ನಮನ ಸಲ್ಲಿಸುವ ಮೂಲಕ ಸೇನಾ ದಿನ ಆಚರಣೆ ಶುರುವಾಯಿತು.ನಂತರ ಸೇನೆಯ 8 ಕಂಟಿಂಜೆಂಟïಗಳು ನಡೆಸಿಕೊಡಲಿರುವ ಪರೇಡ್‍ಯನ್ನು […]