ಇಂಧನ ಪೂರೈಕೆಯಲ್ಲಿ ಗೋಲ್‍ಮಾಲ್, 8 ಜನರ ವಿರುದ್ಧ ಕೇಸ್

ಥಾಣೆ. ಅ, 17- ಇಂಧನ ಪೂರೈಕೆ ವೇಳೆ ತಪ್ಪು ದಾಖಲೆಗಳನ್ನು ನಿರ್ಮಿಸಿ 6.83 ಲಕ್ಷ ರೂಪಾಯಿ ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ನವಿ ಮುಂಬೈ ಪೊಲೀಸರು ಎಂಟು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇಂಧನ ಪೂರೈಸಿದ ಪೆಟ್ರೋಲ್ ಬಂಕ್ ಮಾಲೀಕರು, ಉದ್ಯೋಗಿಗಳು ಮತ್ತು ಪೊಲೀಸ್ ಚಾಲಕ ಕೂಡ ಸೇರಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇಂಧನ ಪೂರೈಕೆ ಮಾಡಿದ ನಂತರ ನೀಡುವ ಬಿಲ್ ಮೊತ್ತವನ್ನು ದುರುಪಯೋಗಪಡಿಸಿಕೊಳ್ಳಲು ಆರೋಪಿಗಳು ಸಂಚು ಮಾಡಿದ್ದರು, ಈ ದಂಧೆಯು ದೀರ್ಘಕಾಲದಿಂದ ನಡೆಯುತ್ತಿದೆ ಎಂದು […]