ಚಿಕಾಗೋದಲ್ಲಿ ಗುಂಡಿನ ದಾಳಿಗೆ 8 ವರ್ಷದ ಬಾಲಕಿ ಬಲಿ

ಚಿಕಾಗೋ, ಜ.24-ತಾಯಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದ 8 ವರ್ಷದ ಬಾಲಕಿಗೆ ಬಂದೂಕುಧಾರಿಯೊಬ್ಬ ಹಾರಿಸಿದ ಗುಂಡುತಾಗಿ ಸಾವನ್ನಪ್ಪಿರುವ ಘಟನೆ ಚಿಕಾಗೋ ನಗರದ ನೈಋತ್ಯ ಭಾಗದಲ್ಲಿ ನಡೆದಿದೆ. ಮೃತ ಬಾಲಕಿತನ್ನು ಚಿಕಾಗೋದ ಮೆಲಿಸ್ಸಾ ಒರ್ಟೆಗಾ ಎಂದು ಗುರುತಿಸಲಾಗಿದೆ. ತನ್ನ ತಾಯಿಯೊಂದಿಗೆ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಹತ್ತಿರದ ಅಂಗಡಿಯಿಂದ ಹೊರಬಂದ 26 ವರ್ಷದ ವ್ಯಕ್ತಿ ಗುಂಡು ಹಾರಿಸಿದ ಎಂದು ಪೊಲೀಸ್ ವರದಿ ತಿಳಿಸಿದೆ. ಗಂಭೀರ ಸ್ಥಿತಿಯಲ್ಲಿ ತಕ್ಷಣ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತ್ತು ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುಂಡಿನ […]