ಪೊಲೀಸ್ ವೇಷಧರಿಸಿ 80 ಲಕ್ಷ ಸುಲಿಗೆ ಮಾಡಿದ್ದ ಮೂವರ ಬಂಧನ

ಬೆಂಗಳೂರು, ಜ.28- ಅಡಿಕೆ ವ್ಯವಹಾರಕ್ಕೆ ಸಂಬಂಧಿಸಿದ ಹಣವನ್ನು ತೆಗೆದುಕೊಂಡು ಕಾರಿನಲ್ಲಿ ಹೋಗುತ್ತಿದ್ದಾಗ ಮಾರ್ಗಮಧ್ಯೆ ಕಾರನ್ನು ಅಡ್ಡಗಟ್ಟಿ ಪೊಲೀಸ್ ಎಂದು ಹೇಳಿ ಬೆದರಿಸಿ 80 ಲಕ್ಷ ಹಣ ಸುಲಿಗೆ ಮಾಡಿ ಪರಾರಿಯಾಗಿದ್ದ ಅಂತರ್‍ರಾಜ್ಯ ಇಬ್ಬರು ಸ್ಮಗ್ಲರ್‍ಗಳು ಸೇರಿ ಮೂವರನ್ನು ವಿಲ್ಸನ್‍ಗಾರ್ಡನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶ ರಾಜ್ಯದ ಕಡಪ ಜಿಲ್ಲೆಯ ಭತಲ್ ಶಿವರಾಮ್ ಕೃಷ್ಣ ಯಾದವ್ ಅಲಿಯಾಸ್ ಗಲ್ಲಿ ರೌಡಿ(19)ಹಾಗೂ ತಿರುಪತಿಯ ಸ್ಪೆಷಲ್ ಸಬ್ ಜೈಲಿನಲ್ಲಿದ್ದ ಸಹೋದರರಾದ ಶೇಖ್ ಚೆಂಪತಿ ಲಾಲ್ ಬಾಷ(36),ಶೇಖ್ ಚೆಂಪತಿ ಜಾಕೀರ್(27) ಬಂಧಿತ ಆರೋಪಿಗಳು. […]