800 ಕೋಟಿ ಮೈಲಿಗಲ್ಲು ದಾಟಿದ ವಿಶ್ವದ ಜನಸಂಖ್ಯೆ

ನವದೆಹಲಿ,ನ.15- ವಿಶ್ವದ ಜನಸಂಖ್ಯೆ 800 ಕೋಟಿ ತಲುಪಿದ್ದು, ಮಾನವ ಸಂಖ್ಯೆಯ ಪ್ರಮಾಣದಲ್ಲಿ ಮೈಲಿಗಲ್ಲು ಸ್ಥಾಪಿಸಿದಂತಾಗಿದೆ. ಜೊತೆಗೆ ಪ್ರಮುಖ ಸವಾಲುಗಳು ಕೂಡ ಹೆಚ್ಚಾಗಿದೆ ಎಂದು ವಿಶ್ವಸಂಸ್ಥೆ ವಿಶ್ಲೇಷಿಸಿದೆ. ಜನಸಂಖ್ಯೆ ಹೆಚ್ಚಾದಂತೆಲ್ಲ ಪೌಷ್ಟಿಕತೆ, ಸಾರ್ವಜನಿಕ ಆರೋಗ್ಯ, ನೈರ್ಮಲೀಕರಣದಂತಹ ಸವಾಲುಗಳು ತೀವ್ರಗೊಳ್ಳುತ್ತವೆ. ಇವುಗಳನ್ನು ಬದಿಗೆ ಸರಿಸಿ ನಾವು ಮುಂದಡಿ ಇಡಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ.ವಿಶ್ವಾದ್ಯಂತ ತಾರತಮ್ಯ ತೀವ್ರಗೊಂಡಿದೆ. ವಿಶ್ವದ ಜನಸಂಖ್ಯೆಯಲ್ಲಿ ಅರ್ಧ ಭಾಗದಷ್ಟು ಜನ ಖರೀದಿ ಶಕ್ತಿಯನ್ನೇ ಹೊಂದಿಲ್ಲದಷ್ಟು ಬಡತನದಿಂದ ನರಳುತ್ತಿದ್ದಾರೆ. ಮತ್ತೊಂದೆಡೆ ಶೇ.10ರಷ್ಟು ಶ್ರೀಮಂತರ ಬಳಿ ಸಂಪತ್ತು ಕ್ರೂಢೀಕರಣಗೊಂಡಿದ್ದು, ಒಟ್ಟು […]