ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಅಪರಾಧಿಗೆ 8 ವರ್ಷ ಕಠಿಣ ಶಿಕ್ಷೆ

ತಿರುವನಂತಪುರಂ,ಜ.21- ಮದುವೆಯಾಗುವ ಭರವಸೆಯೊಂದಿಗೆ 14 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ ಇಲ್ಲಿನ ಶೀಘ್ರ ವಿಲೇವಾರಿ ನ್ಯಾಯಾಲಯ ಎಂಟು ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ. ವಟ್ಟಿಯೂರುಕಾವು ನಿವಾಸಿ 28 ವರ್ಷದ ಲಾಲ್ ಪ್ರಕಾಶ್ ಶಿಕ್ಷೆಗೆ ಗುರಿಯಾದ ಅಪರಾಧಿ. ಪ್ರಾಸಿಕ್ಯೂಷನ್ ಪ್ರಕಾರ, 2013ರಲ್ಲಿ ಆರೋಪಿ ಪ್ರಕಾಶ್ 14 ವರ್ಷದ ಬಾಲಕಿಯನ್ನು ಬಲೆಗೆ ಬೀಳಿಸಿಕೊಂಡು ಸ್ನೇಹಿತನ ಮನೆಗೆ ಕರೆದುಕೊಂಡು ಹೋಗಿದ್ದು, ಅತ್ಯಾಚಾರ ಎಸಗಿದ್ದ. ನಂತರ ಬಾಲಕಿಗೆ ತನ್ನ ಕುಟುಂಬದ ಸದಸ್ಯರನ್ನು ಸಂಪರ್ಕಿಸಲು ಅವಕಾಶ ನೀಡಿರಲಿಲ್ಲ. ಎರಡು ವಾರಗಳ ನಂತರ ಆಕೆ […]