ಮಧ್ಯಪ್ರದೇಶದಲ್ಲಿ ಧಾರಾಕಾರ ಮಳೆ, ಸಿಡಿಲಿಗೆ 9 ಮಂದಿ ದುರ್ಮರಣ

ಭೂಪಾಲ್, ಆ.7- ಇತ್ತೀಚೆಗೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮಧ್ಯಪ್ರದೇಶದಲ್ಲಿ ಅನಾಹುತಗಳು ಸಂಭವಿಸುತ್ತಲೇ ಇದ್ದು, ಕಳೆದ 24 ಗಂಟೆಗಳಲ್ಲಿ ರಾಜ್ಯದ ವಿಶಾ, ಸಟ್ನಾ ಮತ್ತು ಗುಣಾ ಜಿಲ್ಲೆಗಳಲ್ಲಿ ಆಗಸದಲ್ಲಿ ಉಂಟಾದ ಸಿಡಿಲಿನಿಂದಾಗಿ 9 ಮಂದಿ ಮೃತಪಟ್ಟಿರುವ ದಾರುಣ ಘಟನೆ ಸಂಭವಿಸಿದೆ. ಮರದ ಆಸರೆಗೆ ಹೋಗಿ ಜೀವ ಕಳೆದುಕೊಂಡರು: ಮಧ್ಯಪ್ರದೇಶದ ವಿಶಾ ಜಿಲ್ಲೆಯ ಅಗ್ಸೋಡ್ ಗ್ರಾಮದಲ್ಲಿ ಸುರಿಯುತ್ತಿದ್ದ ಭಾರೀ ಮಳೆಯಿಂದ ತಪ್ಪಿಸಿಕೊಳ್ಳಲು ಮರದ ಆಸರೆ ಪಡೆದಿದ್ದಾಗ ಉಂಟಾದ ಸಿಡಿಲಿಗೆ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ನಗರ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಕುನ್ವರ್ […]