ಪಾಕ್‍ನಲ್ಲಿ ಆತ್ಮಹತ್ಯಾ ದಾಳಿ : 9 ಪೊಲೀಸ್ ಸಿಬ್ಬಂದಿ ಸಾವು

ಕರಾಚಿ,ಮಾ.6- ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಸೋಮವಾರ ನಡೆದ ಆತ್ಮಾಹುತಿ ದಾಳಿಯಲ್ಲಿ ಕನಿಷ್ಠ ಒಂಬತ್ತು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದು, 13 ಮಂದಿ ಗಾಯಗೊಂಡಿದ್ದಾರೆ. ಕ್ವೆಟ್ಟಾ-ಸಿಬಿ ಹೆದ್ದಾರಿಯ ಕಾಂಬ್ರಿ ಸೇತುವೆಯ ಮೇಲೆ ಬಲೂಚಿಸ್ತಾನ್ ಕಾನ್‍ಸ್ಟಾಬ್ಯುಲರಿ ಸಿಬ್ಬಂದಿಯ ಟ್ರಕ್ ಬಳಿ ಸ್ಪೋಟ ಸಂಭವಿಸಿದೆ ಎಂದು ಎಕ್ಸ್‍ಪ್ರೆಸ್ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ. ಇದು ಆತ್ಮಹತ್ಯಾ ದಾಳಿ ಎಂದು ಪ್ರಾಥಮಿಕ ವರದಿಗಳು ಸ್ಪಷ್ಟಪಡಿಸಿವೆ ಎಂದು ಕಚ್ಚಿಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‍ಎಸ್‍ಪಿ) ಮೆಹಮೂದ್ ನೋಟ್ಜೈ ಹೇಳಿದ್ದಾರೆ. ಸೋಟದ ನಿಖರವಾದ ಸ್ವರೂಪವನ್ನು ಕಂಡುಹಿಡಿಯಲು ತನಿಖೆ […]