ನಕಲಿ NOC ಸೃಷ್ಟಿಸಿ ಭಾರೀ ವಂಚನೆ, 90 ಲಕ್ಷ ಮೌಲ್ಯದ ಕಾರುಗಳ ವಶ

ಬೆಂಗಳೂರು,ಡಿ.23- ಕಾರುಗಳಿಗೆ ಸಾಲ ನೀಡಿದ್ದ ಬ್ಯಾಂಕ್ ಮತ್ತು ಫೈನಾನ್ಸ್ಗಳ ನಕಲಿ ಎನ್ಒಸಿಗಳನ್ನು ಸೃಷ್ಟಿಸಿ ಸೆಕೆಂಡ್ಹ್ಯಾಂಡ್ ಕಾರುಗಳನ್ನು ಮಾರಾಟ ಮಾಡಿ ವಂಚಿಸುತ್ತಿದ್ದ ಜಾಲವನ್ನು ಬನಶಂಕರಿ ಠಾಣೆ ಪೊಲೀಸರು ಪತ್ತೆಹಚ್ಚಿ ಮೂವರನ್ನು ಬಂಧಿಸಿ 90 ಲಕ್ಷ ಮೌಲ್ಯದ ಏಳು ಕಾರು ಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಭಾಕರ(40), ಪ್ರಕಾಶ್ ಅಲಿಯಾಸ್ ಚೀಟಿ ಪ್ರಕಾಶ(33) ಮತ್ತು ಕಿರಣ್ (44) ಬಂಧಿತ ವಂಚಕರು. ಆರೋಪಿಗಳಿಂದ 90 ಲಕ್ಷ ರೂ. ಬೆಲೆಬಾಳುವ ಮಾರುತಿ ಸುಜುಕಿ ಸಿಯಾಜ್ ಕಾರು, ಟಯೋಟೊ ಫಾರ್ಚುನರ್, ಟೊಯೊಟೊ ಇನ್ನೋವಾ ಕ್ರಿಸ್ಟಾ, ಟೆಂಪೊ ಟ್ರಾವೆಲ್ಲರ್, […]

ದಾಖಲೆ ಇಲ್ಲದ 90 ಲಕ್ಷ ಮೌಲ್ಯದ ಆಭರಣ, 22 ಲಕ್ಷ ಹಣ ವಶಕ್ಕೆ

ಬೆಂಗಳೂರು, ನ.30- ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ಬ್ಯಾಗ್ ಪರಿಶೀಲಿಸಿದಾಗ ಅದರಲ್ಲಿ ಯಾವುದೇ ದಾಖಲೆ ಇಲ್ಲದ 90 ಲಕ್ಷ ಮೌಲ್ಯದ 1 ಕೆಜಿ 800 ಗ್ರಾಂ ಚಿನ್ನಾಭರಣ ಹಾಗೂ 22 ಲಕ್ಷ ಹಣ ಪತ್ತೆಯಾಗಿದ್ದು, ಎಸ್‍ಜೆ ಪಾರ್ಕ್ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗಣೇಶ್ ಎಂಬಾತ ನ.27ರಂದು ಮಧ್ಯ ರಾತ್ರಿ ಎಸ್‍ಪಿ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಬ್ಯಾಗ್ ಹಿಡಿದುಕೊಂಡು ತಿರುಗಾಡುತ್ತಿದ್ದನು. ಇದನ್ನು ಗಮನಿಸಿದ ಗಸ್ತಿನಲ್ಲಿದ್ದ ಪೊಲೀಸರು ಆತನ ಬಳಿ ಹೋಗುತ್ತಿದ್ದಂತೆ ಪರಾರಿಯಾಗಲು ಯತ್ನಿಸಿದ್ದಾನೆ. 40 ಲಕ್ಷ ಮೌಲ್ಯದ […]