ಗುಜರಿ ಸೇರಲಿವೆ 990 ಬಿಎಂಟಿಸಿ ಬಸ್‍ಗಳು..!

ಬೆಂಗಳೂರು,ಜ.6- ಮೆಟ್ರೋ ರೈಲಿನ ಕಾಲದಲ್ಲೂ ಜಟಕಾ ಬಂಡಿಗಳಂತೆ ಸಾಗುವ ಬಿಎಂಟಿಸಿ ಬಸ್‍ಗಳ ಸಂಚಾರದ ಬಗ್ಗೆ ಸಾರ್ವಜನಿಕರಿಗೆ ಇರುವ ತಾತ್ಸಾರ ಮನೋಭಾವನೆಯನ್ನು ಹೋಗಲಾಡಿಸುವ ಪ್ರಯತ್ನಕ್ಕೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನಿರ್ಧರಿಸಿದೆ. ಸಂಚರಿಸುವ ಸಂದರ್ಭದಲ್ಲೇ ಎಲ್ಲೇಂದರಲ್ಲಿ ಕೆಟ್ಟು ನಿಲ್ಲುವ ಬಸ್‍ಗಳಿಗೆ ಮುಕ್ತಿ ಹಾಡಲು ನಿರ್ಧರಿಸಿರುವ ಸಂಸ್ಥೆ ವಯಸ್ಸಾದ 990 ಬಸ್‍ಗಳನ್ನು ಗುಜರಿಗೆ ಹಾಕಲು ತೀರ್ಮಾನಿಸಿದೆ. ದಿನಕಳೆದಂತೆ ನಮ್ಮ ಬೆಂಗಳೂರು ಟ್ರಾಫಿಕ್ ಕ್ಯಾಪಿಟಲ್ ಆಗುತ್ತಿದ್ದು, ಇಲ್ಲಿ ಜನಸಂಖ್ಯೆಗಿಂತ ವಾಹನಗಳ ಸಂಖ್ಯೆಯೇ ಹೆಚ್ಚಾಗಿದೆ. ಟ್ರಾಫಿಕ್ ಸಮಸ್ಯೆ ನಿವಾರಣಗೆ ಪಬ್ಲಿಕ್ ಟ್ರಾನ್ಸ್‍ಪೋರ್ಟೇಶನ್ ಉಪಯೋಗಿಸಿ […]