ಜನವರಿಯಲ್ಲಿ 1500 ಎಇಇ ಹುದ್ದೆಗಳಿಗೆ ನೇಮಕಾತಿ

ಬೆಳಗಾವಿ,ಡಿ.20- ಇಂಧನ ಇಲಾಖೆಯಲ್ಲಿ ಕರೆಯಲಾಗಿದ್ದ 1500 ಸಹಾಯಕ ಕಾರ್ಯಪಾಲಕ ಅಭಿಯಂತರ(ಎಎಇ) ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆದೇಶವನ್ನು ಜನವರಿ ತಿಂಗಳ ಮೊದಲ ವಾರದಲ್ಲಿ ನೇಮಕಾತಿ ಆದೇಶ ನೀಡಲಾಗುವುದು ಎಂದು ಇಂಧನ ಸಚಿವ ವಿ.ಸುನೀಲ್‍ಕುಮಾರ್ ವಿಧಾನಸಭೆಗೆ ತಿಳಿಸಿದರು. ಶೂನ್ಯವೇಳೆಯಲ್ಲಿ ಶಾಸಕ ಎಸ್.ಸುರೇಶ್‍ಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಎಇಇ ಹುದ್ದೆಗಳಿಗೆ ನೇರನೇಮಕಾತಿಯನ್ನು ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಇ)ಕ್ಕೆ ನೀಡಲಾಗಿತ್ತು. ಕೆಲವು ಕಾರಣದಿಂದ ಪರೀಕ್ಷೆ ಫಲಿತಾಂಶ ತಡವಾಗಿದೆ ಎಂದು ಒಪ್ಪಿಕೊಂಡರು. ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು. ಈ ಅಧಿವೇಶನ ಮುಗಿಯುವುದರೊಳಗೆ […]