ಭಗವಂತಮಾನ್ ಪಂಜಾಬ್ ಎಎಪಿ ಸಿಎಂ ಅಭ್ಯರ್ಥಿ

ಚಂಡೀಗಢ, ಜ. 18- ಚುನಾವಣೆ ಘೋಷಣೆಯಾಗಿರುವ ಪಂಜಾಬ್ ರಾಜ್ಯಕ್ಕೆ ಆಮ್ ಆದ್ಮಿಯಿಂದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಸಂಸದ ಭಗವಂತ್ ಮಾನ್ ಆಯ್ಕೆಯಾಗಿದ್ದಾರೆ. ಪ್ರಜಾಸತ್ತಾತ್ಮಕ ಮಾರ್ಗದಲ್ಲಿ ಸಂಗ್ರಹಿಸಲಾದ ಅಭಿಪ್ರಾಯಗಳನ್ನು ಆಧಾರಿಸಿ ಭಗವಂತ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸುತ್ತಿರುವುದಾಗಿ ಅರವಿಂದ್ ಕೇಜ್ರಿವಾಲ್ ಸ್ಪಷ್ಟಪಡಿಸಿದ್ದಾರೆ. ಪಂಜಾಬ್‍ನಲ್ಲಿ ಇತ್ತೀಚೆಗೆ ಕಾಂಗ್ರೆಸ್‍ನಲ್ಲಾಗಿರುವ ಬದಲಾವಣೆಗಳ ಲಾಭ ಪಡೆದು ಎಎಪಿಯನ್ನು ಅಕಾರಕ್ಕೆ ತರುವ ಪ್ರಯತ್ನದಲ್ಲಿರುವ ಅರವಿಂದ್ ಕೇಜ್ರಿವಾಲ್ ಅವರು ಎಎಪಿ ಪಕ್ಷ ಅಕಾರಕ್ಕೆ ಬರುವ ಮುನ್ನವೇ ಮುಂದಿನ ಮುಖ್ಯಮಂತ್ರಿಯಾಗಿ ಸಂಗ್ರೂರ್ ಸಂಸದ ಭಗವಂತ್ ಮಾನ್‍ರನ್ನು ಪಂಜಾಬ್‍ನ ಸಿಎಂ ಆಗಿ […]