ರಾಜ್ಯಪಾಲರ ಭಾಷಣದ ವೇಳೆ ಕಾಂಗ್ರೆಸ್‍ ಕುರ್ಚಿಗಳು ಖಾಲಿ ಖಾಲಿ

ಬೆಂಗಳೂರು,ಫೆ.10- ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿಧಾನ ಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡುವ ವೇಳೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‍ನ ಬಹುತೇಕ ಶಾಸಕರು ಗೈರು ಹಾಜರಾಗಿದ್ದರು. ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಭಾಷಣ ಮಾಡುವಾಗ ಪ್ರತಿಪಕ್ಷಗಳು ಹಾಜರಿರುವುದು ರೂಢಿ ಸಂಪ್ರದಾಯ, ಮೊದಲಿನಿಂದಲೂ ಇದು ಪಾಲನೆಯಾಗುತ್ತಿದೆ. ಕೆಲವು ವೇಳೆ ರಾಜಕೀಯ ಸಂಘರ್ಷಗಳು ಸಹನೆ ಮಿತಿ ಮೀರಿದ ವೇಳೆಯಲ್ಲೂ ಪ್ರತಿಪಕ್ಷಗಳು ಸದನದಲ್ಲಿ ಹಾಜರಿದ್ದು, ಆಕ್ಷೇಪಿಸುವುದು, ಪ್ರತಿಭಟಿಸುವುದು ಅಥವಾ ಬಹಿಷ್ಕರಿಸುವುದನ್ನು ಮಾಡಿವೆ. ಇದೇ ಮೊದಲ ಬಾರಿಗೆ ಶೇ.80ರಷ್ಟು ಸದಸ್ಯರು […]

ವಿಧಾನಸಭೆ ಕಲಾಪಕ್ಕೆ ಸಚಿವರು ಚಕ್ಕರ್, ಸ್ಪೀಕರ್ ತರಾಟೆ

ಬೆಂಗಳೂರು,ಸೆ.15- ಸಚಿವರು, ಶಾಸಕರಿಗೆ ಪ್ರಶ್ನೋತ್ತರ ಕಲಾಪವು ಮೊದಲ ಆದ್ಯತೆ ಆಗಬೇಕು ಎಂದು ಸಭಾಧ್ಯಕ್ಷರು ವಿಧಾನಸಭೆಯಲ್ಲಿ ತರಾಟೆಗೆ ತೆಗೆದುಕೊಂಡರು. ಪ್ರಶ್ನೋತ್ತರ ಅವಧಿಯಲ್ಲಿ ಸಚಿವರ ಹಾಜರಾತಿ ಕೊರತೆಯ ಬಗ್ಗೆ ವಿರೋಧ ಪಕ್ಷದ ಉಪ ನಾಯಕ ಯು.ಟಿ.ಖಾದರ್, ಜೆಡಿಎಸ್ ಸಚೇತಕ ವೆಂಕಟರಾವ್ ನಾಡಗೌಡ ಸೇರಿದಂತೆ ಪ್ರತಿಪಕ್ಷಗಳ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಆಗ ಸಮಾಧಾನಪಡಿಸಿದ ಸಭಾಧ್ಯಕ್ಷರು ಶಾಸಕ ಸಿ.ಎಂ.ಲಿಂಬಣ್ಣನವರ್ ಅವರನ್ನು ಪ್ರಶ್ನೆ ಕೇಳುವಂತೆ ಆಹ್ವಾನಿಸಿದರು. ಆ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹಾಜರಿರಲಿಲ್ಲ. ನಂಜೇಗೌಡ ಅವರು ಪ್ರಶ್ನೆ ಕೇಳಿದ ವೇಳೆಗೆ […]