ಬಿಬಿಎಂಪಿ ಕಚೇರಿಗಳ ಮೇಲೆ ಮುಂದುವರೆದಿದ ಎಸಿಬಿ ದಾಳಿ

ಬೆಂಗಳೂರು,ಫೆ.28-ಬಿಬಿಎಂಪಿ ಕಚೇರಿಗಳ ಮೇಲೆ ಎಸಿಬಿ ದಾಳಿ ಮುಂದುವರೆದಿದೆ. ಕಳೆದ ಶುಕ್ರವಾರ ಬಿಬಿಎಂಪಿ ಕೇಂದ್ರ ಕಚೇರಿ, ನಗರ ಯೋಜನೆ, ಹಣಕಾಸು ಇಲಾಖೆ 8 ವಲಯಗಳ ಕಚೇರಿ ಸೇರಿದಂತೆ 27 ಕಡೆ ಎಸಿಬಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದರು. ಶನಿವಾರ, ಭಾನುವಾರ ರಜೆ ಕಾರಣ ಸ್ಥಗಿತವಾಗಿದ್ದ ದಾಳಿ ಇಂದು ಮುಂದುವರೆದಿದ್ದು ,ಡಿವೈಎಸ್ಪಿ ರವಿಶಂಕರ್ ನೇತೃತ್ವದಲ್ಲಿ ಆಗಮಿಸಿದ ಅಕಾರಿಗಳು, ಬಿಬಿಎಂಪಿ ಆರೋಗ್ಯ ವಿಭಾಗ ಕಚೇರಿಯಲ್ಲಿ ಪರಿಶೀಲನೆ ನಡೆಸಿದರು. ಪಾಲಿಕೆ ಹೆರಿಗೆ ಆಸ್ಪತ್ರೆಯ ಮುಖ್ಯಸ್ಥರ ಕೊಠಡಿ ಸೇರಿದಂತೆ ವಿವಿಧೆಡೆ ಪರಿಶೀಲನೆ ನಡೆಸಿ ದಾಖಲೆಗಳನ್ನು […]