ಗೆಲ್ಹೋಟ್ ಬೆಂಬಲಿಗರ ರಾಜೀನಾಮೆ ಅಂಗೀಕರಿಸುವಂತೆ ಬಿಜೆಪಿ ಆಗ್ರಹ

ಜೈಪುರ,ಅ.18-ರಾಜಸ್ತಾನದಲ್ಲಿ ಇತ್ತೀಚೆಗೆ ನಡೆದ ರಾಜಕೀಯ ಮೇಲಾಟದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಲ್ಹೋಟ್ ಬೆಂಬಲಿಗರು ನೀಡಿರುವ ರಾಜೀನಾಮೆಯನ್ನು ಅಂಗೀಕರಿಸುವಂತೆ ಪ್ರತಿಪಕ್ಷ ಬಿಜೆಪಿ ವಿಧಾನಸಭಾಧ್ಯಕ್ಷರನ್ನು ಆಗ್ರಹಿಸಿದೆ. ಪ್ರತಿಪಕ್ಷದ ನಾಯಕ ಗುಲಾಬ್ ಚಂದ್ ಕಟಾರಿಯ ಅವರ ನೇತೃತ್ವದ ನಿಯೋಗ ಇಂದು ವಿಧಾನಸಭಾಧ್ಯಕ್ಷರನ್ನು ಅವರ ಮನೆಯಲ್ಲಿ ಭೇಟಿ ನೀಡಿ ಮನವಿ ಮಾಡಿದೆ. ಅಶೋಕ್ ಗೆಲ್ಹೋಟ್ ಬೆಂಬಲಿಗರು ತಮ್ಮ ರಾಜೀನಾಮೆ ಪತ್ರಗಳನ್ನು ಹಿಂಪಡೆದು ರಾಜ್ಯದ ಜನರ ಕ್ಷಮೆಯಾಚನೆ ಮಾಡಬೇಕು. ಇಲ್ಲದೇ ಹೋದರೆ ವಿಧಾನಸಭಾಧ್ಯಕ್ಷರು ಅಷ್ಟೂ ರಾಜೀನಾಮೆಗಳನ್ನು ಅಂಗೀಕರಿಸಬೇಕೆಂದು ಒತ್ತಡ ಹಾಕಿದ್ದಾರೆ. ಹಲವು ಸಚಿವರು ಸೇರಿದಂತೆ 91ಕ್ಕೂ […]