ದೇಶೀಯ ಆಟಿಕೆ ಮಾರುಕಟ್ಟೆ ರಫ್ತು ಗಣನೀಯ ಹೆಚ್ಚಳ : ಪ್ರಧಾನಿ ಮೋದಿ

ನವದೆಹಲಿ,ಜು.31-ಭಾರತದ ಸ್ಥಳೀಯ ಉತ್ಪಾದನೆ ಉತ್ತೇಜನಕಾರಿ ಕ್ರಮಗಳು ಫಲ ನೀಡಿದ್ದು, ದೇಶೀಯ ಆಟಿಕೆ ಮಾರುಕಟ್ಟೆ ರಫ್ತು 2600 ಕೋಟಿಗೆ ಹೆಚ್ಚಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಜನಪ್ರಿಯ ರೇಡಿಯೋ ಕಾರ್ಯಕ್ರಮ ಮನ್ ಕೀ ಬಾತ್‍ನ 91ನೇ ಸರಣಿಯಲ್ಲಿ ಮಾತನಾಡಿದ ಅವರು, ಭಾರತ ಆಟಿಕೆಗಳ ರಫ್ತಿನಲ್ಲಿ ಜಾಗತಿಕ ಶಕ್ತಿಕೇಂದ್ರವಾಗಿದೆ. ಆಟಿಕೆಗಳ ಆಮದು ಶೇ.70ರಷ್ಟು ಕುಸಿದಿದೆ. ಈ ನಡುವೆ ರಫ್ತು ಹೆಚ್ಚಾಗಿದ್ದು, 300, 400 ಕೋಟಿ ರೂ.ಗಳಿದ್ದ ವಹಿವಾಟು 2600 ಕೋಟಿಗಳಿಗೆ ಹೆಚ್ಚಾಗಿದೆ ಎಂದು ತಿಳಿಸಿದರು. ಭಾರತೀಯ ಆಟಿಕೆ ತಯಾರಕರು […]