ಮಹಿಳೆಯರು, ಮಕ್ಕಳು ಸುರಕ್ಷಿತವಲ್ಲದಾಗ ಸಂಭ್ರಮ ಔಚಿತ್ಯವಲ್ಲ: ಕಿರಣ್ ರಿಜಿಜು

ನವದೆಹಲಿ,ಮಾ.2- ಮಹಿಳೆಯರು ಮತ್ತು ಮಕ್ಕಳು ಸುರಕ್ಷಿತವಾಗಿಲ್ಲದಿದ್ದರೆ ಸಮಾಜ ಅಥವಾ ರಾಷ್ಟ್ರವು ತನ್ನ ಸಾಧನೆಗಳನ್ನು ಸಂಭ್ರಮಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಹೇಳಿದ್ದಾರೆ. ಇಲ್ಲಿನ ವಿಜ್ಞಾನ ಭವನದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‍ಎಚ್‍ಆರ್‍ಸಿ) ಆಯೋಜಿಸಿದ್ದ ಮಕ್ಕಳ ಲೈಂಗಿಕ ದೌರ್ಜನ್ಯ ವಸ್ತು ಕುರಿತ ರಾಷ್ಟ್ರೀಯ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ರಿಜಿಜು, ಮಹಿಳೆಯರು ಮತ್ತು ಮಕ್ಕಳ ರಕ್ಷಣೆ ವಿಷಯದಲ್ಲಿ ನಾವು ಕಾನೂನು ನಿಬಂಧನೆಗಳನ್ನು ಮೀರಿ ಹೋಗಬೇಕಾಗುತ್ತದೆ ಮತ್ತು ಸಮಾಜವು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಒಗ್ಗೂಡಬೇಕಿದೆ ಎಂದರು. ಮಕ್ಕಳ […]