ಕೋಮುಗಲಭೆಯ ಆರೋಪಿಗಳು ದೋಷ ಮುಕ್ತ

ಅಯೋಧ್ಯೆ,ಜ.18- ಉತ್ತರ ಪ್ರದೇಶದ ಫೈಜಾಬಾದ್‍ನಲ್ಲಿ ಕಳೆದ ಹತ್ತು ವರ್ಷಗಳ ಹಿಂದೆ ಘಟಿಸಿದ್ದ ಕೋಮುಗಲಭೆಯ ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ದೋಷ ಮುಕ್ತರೆಂದು ಘೋಷಿಸಲಾಗಿದೆ. 2012ರ ಅಕ್ಟೋಬರ್ 24ರಂದು ಫೈಜಾಬಾದ್‍ನಲ್ಲಿ ದುರ್ಗಾದೇವಿಯ ಮೆರವಣಿಗೆ ನಡೆದಿತ್ತು. ದೇವರ ಮೂರ್ತಿಗಳ ಅಪರಿಚಿತ ವ್ಯಕ್ತಿಗಳು ದಾಳಿ ನಡೆಸುತ್ತಿದ್ದಾರೆ ಎಂಬ ವದಂತಿ ವ್ಯಾಪಕವಾಗಿ ಹರಡಲಾರಂಭಿಸಿತ್ತು. ಇದರಿಂದಾಗಿ ಭುಗಿಲೆದ್ದ ಗಲಭೆಯಲ್ಲಿ ಇಬ್ಬರು ಮೃತಪಟ್ಟು ಹಲವರು ಗಾಯಗೊಂಡಿದ್ದರು. ಹತ್ತಾರು ಅಂಗಡಿಗಳು ಮತ್ತು ಮನೆಗಳನ್ನು ಸುಟ್ಟುಹಾಕಲಾಯಿತು, ವ್ಯಾಪಕ ಲೂಟಿ ನಡೆದಿತ್ತು. ಪೊಲೀಸ್ ವಾಹನಗಳಿಗೆ ಪುಂಡರ ಗುಂಪು ಬೆಂಕಿ ಹಚ್ಚಿದ್ದಲ್ಲದೆ, ಪೊಲೀಸ್ […]

CPM ಕಾರ್ಯಕರ್ತನ ಹತ್ಯೆ ಪ್ರಕರಣದಲ್ಲಿ RSS ಕಾರ್ಯಕರ್ತರು ಖುಲಾಸೆ

ಕೊಚ್ಚಿ, ಜು.13- ಕೇರಳದ ತಿರುವನಂತಪುರದಲ್ಲಿ 2008ರಲ್ಲಿ ನಡೆದಿದ್ದ ಸಿಪಿಐ(ಎಂ) ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ 13 ಮಂದಿ ಆರ್‌ಎಸ್‌ಎಸ್‌ ಕಾರ್ಯಕರ್ತರನ್ನು ಆರೋಪದಿಂದ ಖುಲಾಸೆಗೊಳಿಸಿದೆ. ಆರ್‌ಎಸ್‌ಎಸ್‌ ಕಾರ್ಯಕರ್ತರಿಗೆ ಸೆಷನ್ಸ್ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆಗೆ ನ್ಯಾಯಮೂರ್ತಿಗಳಾದ ಕೆ ವಿನೋದ್ ಚಂದ್ರನ್ ಮತ್ತು ಸಿ ಜಯಚಂದ್ರನ್ ಅವರನ್ನೊಳಗೊಂಡ ಪೀಠವು ಅಂಗೀಕರಿಸಿತ್ತು. ಕೇರಳದ ರಾಜಕೀಯ ಬೆಳವಣಿಗೆಗಳ ಬಗ್ಗೆ ನ್ಯಾಯಾಲಯ ಆತಂಕವ್ಯಕ್ತ ಪಡಿಸಿದೆ. ಪೈಪೋಟಿ, ಒಳಸಂಚು, ದ್ವೇಷ ಮತ್ತು ವಂಚನೆಯಿಂದ ಕುದಿಯುತ್ತಿರುವ ಕಡಾಯಿಯಾಗಿರುವ ರಾಜಕೀಯ ಆಗಾಗ್ಗೆ […]